ಕಾರ್ಕಳ: ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಕಳ ವತಿಯಿಂದ ಜೋಡುರಸ್ತೆ ಉಷಾ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಪ್ರತಿಕಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಮುಖ್ಯ ಅಥಿತಿಯಾಗಿ ಭಾಗವಹಿಸಿದ ಉದ್ಯಮಿ ಡಿ.ಆರ್ ರಾಜು ಕಾರ್ಯಕ್ರಮ ಉದ್ಘಾಟಿಸಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಹಾಗೂ ಇನ್ನಿತರ ಸಮಸ್ಯೆ ಕುರಿತು ಮಾತನಾಡಿ, ಮೂಲಭೂತ ಸೌಕರ್ಯ ವಂಚಿತರಾಗಿರುವವರ ಬಗ್ಗೆ ಪತ್ರಕರ್ತರ ಮುಖೇನ ಸರ್ಕಾರದ ಗಮನ ಸೆಳೆಯವ ಪ್ರಯತ್ನವಾಗಬೇಕು. ಪತ್ರಕರ್ತ ಜವಾಬ್ದಾರಿ ಈ ಸಮಾಜದಲ್ಲಿ ಬಹುಮುಖ್ಯವಾಗಿದೆ.ಸಮಾಜ ಮುಖಿ ,ಸಮಾಜದ ಕಾರ್ಯನಡಿಗೆ, ಜಗತ್ತಿಗೆ ತಲುಪಿಸುವ ಕಾರ್ಯದಲ್ಲಿ ಪತ್ರಕರ್ತರ ಪಾತ್ರ ಅಗತ್ಯ ಎಂದು ಹೇಳಿದರು.
ನಿವೃತ್ತಿ ಶಿಕ್ಷಕಿ ಸಾವಿತ್ರಿ ಮನೋಹರ್ ಮಾತನಾಡಿ, ಪತ್ರಕರ್ತರು ಎಂದರೆ ಜನರ ಜೀವನದ ಪ್ರತಿಬಿಂಬ. ಪತ್ರಕರ್ತ ಬದುಕು ತುಂಬಾ ಕಠಿಣ .ಪತ್ರಕರ್ತರು ಬಹಳ ಎಚ್ಚರಿಕೆಯಿಂದ ಕೆಲಸಮಾಡ ಬೇಕು. ಪ್ರಸ್ತುತ ದಿನಗಳಲ್ಲಿಯು ಪತ್ರಿಕೋದ್ಯಮ ಬೆಳವಣಿಗೆ ಕಂಡಾಗ ತುಂಬಾ ಸಂತೋಷವಾಗುತ್ತೆ ಎಂದರು
ಇದೇವೇಳೆ ಹಿರಿಯ ಪತ್ರಕರ್ತ ಹಾಗೂ ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್ ಅವರನ್ನು ಸನ್ಮಾನಿಸಲಾಯಿತು.
ಪತ್ರಕರ್ತರ ಸಂಘದಿAದ ಸನ್ಮಾನಿತರಾದ ಹಿರಿಯ ನಿವೃತ್ತ ಪತ್ರಕರ್ತ ಬಿಪಿನ್ ಚಂದ್ರಪಾಲ್ ಮಾತನಾಡಿ, ಪತ್ರಕರ್ತ ಎಲ್ಲರೊಡನೆ ಬೆರೆಯಬೇಕು ಆದರೆ ಯಾರ ಪರ ಅಥವಾ ಪಕ್ಷಪಾತಿಯಾಗದೇ ಪತ್ರಿಕಾಧರ್ಮ ಪಾಲನೆ ಮಾಡಬೇಕಾದ ಪ್ರಮುಖ ಹೊಣೆಗಾರಿಕೆ ಇದೆ ಎಂದರು. ಪತ್ರಕರ್ತನಾದವನು ನಿಷ್ಠೂರ,ನೇರ ನಡೆನುಡಿಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸುದ್ದಿ ಸಂಗ್ರಹಣೆಯ ಜತೆಗೆಸಮಾಜಕ್ಕೆ ಯಾವ ಸುದ್ದಿ ಶೀಘ್ರವಾಗಿ ತಲುಪಬೇಕೋ ಅದನ್ನು ಪ್ರಕಟಿಸುವ ಬದ್ಧತೆ ಬೆಳೆಸಿಕೊಳ್ಳಬೇಕು ಎಂದರು.ಪತ್ರಕರ್ತ ಸಮಾಜದ ಏಳಿಗೆಗಾಗಿ ಚಿಂತನೆ ಮಾಡಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ಮೊಹಮ್ಮದ್ ಷರೀಫ್ ವಹಿಸಿದ್ದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ, ಉದ್ಯಮಿ ಡಿ.ಅರ್ ರಾಜು, ಸಂಘದ ತಾಲೂಕು ಕೋಶಾಧಿಕಾರಿ ಕೆ ಎಂ ಖಲೀಲ್ , ಜಿಲ್ಲಾ ಸದಸ್ಯ ಉದಯ ಉಪಸ್ಥಿತರಿದ್ದರು.
ಕೃಷ್ಣ ಎಮ್ ನಾಯ್ಕ್ ಸ್ವಾಗತಿಸಿ, ಉದಯ ಮುಂಡ್ಕೂರು ವಂದಿಸಿದರು. ಹರೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
`