Share this news

ಕಾರ್ಕಳ ಆ. 06: ಪರಶುರಾಮನ ನಕಲಿ ಪ್ರತಿಮೆ ಸ್ಥಾಪನೆಯಿಂದ ದೇವರು ಹಾಗೂ ಧರ್ಮದ ವಿಚಾರದಲ್ಲಿ ಇಡೀ ರಾಜ್ಯಕ್ಕೆ ಸಮಸ್ತ ಹಿಂದೂ ಧರ್ಮಕ್ಕೆ ಅನ್ಯಾಯವಾಗಿದೆ. ಯಾವುದೇ ಕಾರ್ಯಾದೇಶವಿಲ್ಲದೇ ತನ್ನ ಖಾತೆಗೆ 1 ಕೋಟಿ ರೂಪಾಯಿ ಹಾಕಿಸಿಕೊಂಡ ಶಿಲ್ಪಿ ಕೃಷ್ಣ ನಾಯಕ್ ನಿರ್ಮಿತಿ ಕೇಂದ್ರದ ಅಧಿಕಾರಿಗಳನ್ನೇ ಯಾಮಾರಿಸಿದ್ದಾನೆ.ನಕಲಿ ಪ್ರತಿಮೆ ಸ್ಥಾಪಿಸಿದ ಬಿಜೆಪಿಯ ಸುನಿಲ್ ಕುಮಾರ್ ಬಕೆಟ್ ಗಳು ಈಗ ಸಮರ್ಥನೆಗೆ ಮುಂದಾಗಿದ್ದಾರೆ. ಇದರ ವಿರುದ್ಧ ನ್ಯಾಯಯುತ ಹೋರಾಟ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಹೇಳಿದ್ದಾರೆ.
ಅವರು ಸೋಮವಾರ ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿ, ಪರಶುರಾಮನ ಪ್ರತಿಮೆ ನಿರ್ಮಾಣಕ್ಕೆ ಡಿಸೆಂಬರ್‌ನಲ್ಲಿ ಕಾರ್ಯಾದೇಶ ಸಿಕ್ಕಿ ಕೇವಲ ಒಂದೇ ತಿಂಗಳ ಒಳಗಾಗಿ ಮೂರ್ತಿ ಪ್ರತಿಷ್ಠಾಪನೆಯಾಗಿದೆ ಎಂದರೆ ಬಹಳ ಅಚ್ಚರಿಯ ವಿಷಯ, ಇದಲ್ಲದೇ ಪ್ರವಾಸೋದ್ಯಮ ಇಲಾಖೆಯು ಈ ಯೋಜನೆಗೆ ಚಾಲನೆ ನೀಡಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಉದ್ಘಾಟನೆಯಾಗಿರುವುದು ವಿಪರ್ಯಾಸ. ಜನರನ್ನು ಜಾತಿ ಹಾಗೂ ಧರ್ಮದ ಆಧಾರದಲ್ಲಿ ಸುನಿಲ್ ಕುಮಾರ್ ಸಮಾಜವನ್ನು ಒಡೆಯುತ್ತಿದ್ದಾರೆ. ಸುನಿಲ್ ಕುಮಾರ್ ಮಾಡಿರುವ ಈ ಕೆಲಸಕ್ಕೆ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಆದ್ದರಿಂದ ತಮ್ಮ ಚೇಲಾಗಳಿಂದ ಹೇಳಿಕೆ ಕೊಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪರಶುರಾಮನ ನಕಲಿ ಪ್ರತಿಮೆ ಪ್ರತಿಷ್ಟಾಪನೆ ಮಾಡುವ ಮೂಲಕ ಸಮಸ್ತ ಹಿಂದೂ ಸಮಾಜ ತಲೆತಗ್ಗಿಸುವಂತಾಗಿದೆ.ಪ್ರತಿಷ್ಠಾಪನೆಯಾದ ಮೂರ್ತಿ ಕಂಚಿನದ್ದೇ ಎಂದು ಕೃಷ್ಣ ನಾಯಕ್ ದೇವರ ಮುಂದೆ ಪ್ರಮಾಣ ಮಾಡಲಿ ಅಂದೇ ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡುವುದಾಗಿ ಹೇಳಿದರು. ಕೇವಲ ಚುನಾವಣೆಗೋಸ್ಕರ ಮಾಡಿರುವ ಈ ಮೂರ್ತಿ ನಕಲಿ ಎನ್ನುವುದು ಜಗಜ್ಜಾಹೀರಾಗಿದೆ ಆದರೆ ಇದನ್ನು ಬಿಜೆಪಿಯವರು ಒಪ್ಪಲು ಸಿದ್ಧರಿಲ್ಲ. ಜನರ ಬಳಿ ಸುಳ್ಳನ್ನು ಮರೆಮಾಚಬಹುದು ಆದರೆ ದೇವರ ಕಣ್ಣಿಗೆ ಬಟ್ಟೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು. ಗೋಮಾಳ ಜಾಗದಲ್ಲಿ ಪರಶುರಾಮ ಥೀಮ್ ಪಾರ್ಕ್ ಸ್ಥಾಪಿಸಿ ಅದನ್ನು ಕಂದಾಯ ಭೂಮಿಯನ್ನಾಗಿ ಪರಿವರ್ತಿಸುವ ಕೆಲಸವನ್ನು ಕೂಡ ಮಾಡದೇ ಸುಬಿಲ್ ಕುಮಾರ್ ಅವರು 5 ವರ್ಷದವರೆಗೂ ಈ ವಿಷಯವನ್ನು ಜೀವಂತವಾಗಿರಿಸಿ ಈಗ ಈ ಕಾಮಗಾರಿಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸುತ್ತಿದ್ದಾರೆ ಎಂದರು. ಸುನಿಲ್ ಕುಮಾರ್ ಕೇವಲ ಅಧಿಕಾರ ಹಾಗೂ ಹಣಕ್ಕಾಗಿ ನಕಲಿ ಮೂರ್ತಿ ಸ್ಥಾಪಿಸಿದ್ದಾರೆ ಇದರ ತನಿಖೆ ನಡೆಸಿ ಎಂದು ಬಿಜೆಪಿಯವರೇ ನನ್ನಲ್ಲಿ ಹೇಳಿದ್ದಾರೆ ಎಂದು ಉದಯ ಶೆಟ್ಟಿ ಆರೋಪಿಸಿದರು. ಇದೀಗ ತನಿಖೆಯ ಭಾಗವಾಗಿ ಉಡುಪಿ ಎಸ್ಪಿ ಹಾಗೂ ಸಮಸ್ತ ಪೊಲೀಸ್ ಇಲಾಖೆ ಪರಶುರಾಮ ಮೂರ್ತಿಯ ಕಂಚಿನ ಬಿಡಿಭಾಗಗಳನ್ನು ವಶಪಡಿಸಿಒಕೊಳ್ಳುವ ಮೂಲಕ ಇವರ ಅಸಲಿಯತ್ತು ಬಯಲಿಗೆಳೆದ್ದಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ್ ರಾವ್ ಮಾತನಾಡಿ, ನಕಲಿ ಮೂರ್ತಿ ಸ್ಥಾಪನೆ ಮಾಡಿ ಇದೀಗ ಕಾಂಗ್ರೆಸ್ ಕಾರ್ಯಕರ್ತರು,ಉದಯ ಶೆಟ್ಟಿಯವರ ಬಗ್ಗೆ ಕೀಳು ಪದಗಳಿಂದ ನಿಂದಿಸುತ್ತಿದ್ದೀರಿ ಎಂದರೆ ಇದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ.ಕಾಂಗ್ರೆಸ್ ನಾಯಕರನ್ನು ನಿಂದಿಸುವ ನಿಮ್ಮ ವರ್ತನೆ ಇಲ್ಲಿಗೆ ಕೊನೆಯಾಗಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ತಕ್ಕ ಪ್ರತ್ಯುತ್ತರ ನೀಡಲು ಗೊತ್ತಿದೆ ಎಂದರು. ಪರಶುರಾಮನ ಮೂರ್ತಿಯ ವಿಚಾರವಾಗಿ ಕಾರ್ಕಳ ಶಾಸಕರು ಹಾಗೂ ಬಿಜೆಪಿಯವರು, ಬೊಮ್ಮಾಯಿಯವರಿಂದ ಉದ್ಘಾಟಿಸಿದ ಮೂರ್ತಿ ಕಂಚಿನದ್ದು, ರಾತ್ರಿ ವೇಳೆ ತೆರವು ಮಾಡಿದ ಪ್ರತಿಮೆ ಕಂಚಿನದ್ದು, ಉಳಿದ ಅರ್ಧಭಾಗದ ಪ್ರತಿಮೆ ಕಂಚಿನದ್ದು ಎಂದು ಪ್ರಮಾಣ ಮಾಡಲಿ ಎಂದು ಶುಭದ್ ರಾವ್ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್, ಅಜಿತ್ ಹೆಗ್ಡೆ ಮಾಳ, ವಿವೇಕಾನಂದ ಶೆಣೈ ಮುಂತಾದವರು ಉಪಸ್ಥಿತರಿದ್ದರು

                        

                          

                        

                          

 

`

Leave a Reply

Your email address will not be published. Required fields are marked *