ಕಾರ್ಕಳ, ಆ11: ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಮತ್ತು ಮಣಿಪಾಲದ ಸೆಂಟರ್ ಫಾರ್ ಕಾಂಪ್ರಹೆಂನ್ಸಿವ್ ಸ್ಟ್ರೋಕ್ ರೆಹಬೀಲಿಟೇಷನ್ ಮತ್ತು ರಿಕವರಿ (CCSRR) ಇವರ ಸಹಯೋಗದಲ್ಲಿ ಪಾಶ್ವ ವಾಯು ಪುನಶ್ವೇತನ ಉಚಿತ ಚಿಕಿತ್ಸಾ ಶಿಬಿರ ಮತ್ತು ಜಾಗೃತಿ ಶಿಕ್ಷಣ ಕಾರ್ಯಕ್ರಮ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಹಮ್ಮಿಕೊಳ್ಳಲಾಗಿತ್ತು .
ಮಣಿಪಾಲ ಫಿಸಿಯೋಥೆರಪಿ ವಿಭಾಗದ ಶ್ರೀಮತಿ ಅಕಿಲಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪಾಶ್ವವಾಯು ಅಥವಾ ಸ್ಟ್ರೋಕ್ ಕುರಿತು ಮಾಹಿತಿ ನೀಡುವುದರ ಜೊತೆಗೆ ಪಾರ್ಶ್ವವಾಯು ಸಂಭವಿಸಿದ ರೋಗಿಗಳ ಆರೈಕೆ ಮತ್ತು ಪುನಶ್ವೇತನದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ಮಕ್ಕಳ ತಜ್ಞೆಯಾದ
ಡಾ ಆಶಾ ಹೆಗ್ಡೆ, ಫಿಜಿಯೋಥೆರಪಿ ವಿಭಾಗದ ಪ್ರಾಧ್ಯಾಪಕರಾದ ಡಾ ಪ್ರೀತಾ ಆರ್ ಹಾಜರಿದ್ದರು.
ಪಾಶ್ವವಾಯು ಪೀಡಿತ ರೋಗಿಗಳಿಗೆ ರೋಗಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಉಚಿತ ತಪಾಸಣೆ, ಫಿಸಿಯೋಥೆರಪಿ, ಸಲಹೆ, ಸಮಾಲೋಚನೆ ಮತ್ತು ಜೀವನ ಕ್ರಮದ ಕುರಿತು ಮಾಹಿತಿ ನೀಡಲಾಯಿತು.
ಶ್ರೀಮತಿ ಸಂಧ್ಯಾ ಇವರು ಕಾರ್ಯಕ್ರಮವನ್ನು ನೆರವೇರಿಸಿದರು. ಸುಮಾರು 30 ಮಂದಿ ಸ್ಟ್ರೋಕ್ ಪುನಶ್ವೇತನ ದಲ್ಲಿರುವವರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಈ ಕಾರ್ಯಕ್ರಮದ ಮೂಲಕ ಪಾಶ್ವವಾಯು ರೋಗಿಗಳಿಗೆ ವೈಯಕ್ತಿಕರಿಸಿದ ಸಲಹೆ, ಸೂಚನೆ ನೀಡಲಾಯಿತು. ಇಂತಹ ಸೇವೆಗಳಿಗೆ ಕಾರ್ಕಳ ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆಯು ಸದಾ ಬದ್ದವಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ್ ತಿಳಿಸಿದರು.
`