ಉಡುಪಿ: ದೇಶ ಕಾಯುವ ಯೋಧರ ಬಲಿದಾನಕ್ಕೆ ಬೆಲೆ ತೆರಬೇಕಾದ ಬೃಹತ್ ಜವಾಬ್ದಾರಿ ನಮ್ಮ ಮೇಲಿದೆ. ಮಹಾನ್ ನಾಯಕರು ದೇಶ ಕಟ್ಟಲು ಶ್ರಮಿಸಿದಂತೆ ನಾವು ದೇಶ ಸೇವೆಗೆ ಸದಾ ಸಿದ್ಧರಿರೋಣ. ನಮ್ಮ ಹಕ್ಕುಗಳನ್ನು ಪಡೆದಂತೆ ಕರ್ತವ್ಯಗಳ ಪಾಲಕರು ನಾವಾಗಬೇಕು. ಭಾರತದ ತ್ರಿವರ್ಣ ಧ್ವಜದ ಮಹತ್ವ ಅರಿತು ನಾವೆಲ್ಲ ಭಾರತದ ಹೆಮ್ಮೆಯ ಪ್ರಜೆಗಳಾಗೋಣ ಎಂದು ಸಾವ್ಟ್ವೇರ್ ಕನ್ಸಲ್ಟೆಂಟ್ ಶ್ರೀಯುತ ರಜನೀಶ್ ಆಚಾರ್ಯ ಇವರು ಹೇಳಿದರು.
ಅವರು ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕು.ಸೌಜನ್ಯ ಭಟ್ ಸ್ವತಂತ್ರ ಭಾರತದ ಕುರಿತು ಭಾಷಣ ಮಾಡಿದರು. ಪ್ರಾಂಶುಪಾಲರಾದ ಸಂತೋಷ್ ಇವರು ಸ್ವಾಗತಿಸಿ, ಆಂಗ್ಲ ಭಾಷಾ ಉಪನ್ಯಾಸಕಿ ಕೀರ್ತಿ ಹರೀಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಉಪಪ್ರಾಂಶುಪಾಲರಾದ ಪ್ರಕಾಶ್ ಜೋಗಿ, ಉಪನ್ಯಾಸಕ, ಉಪನ್ಯಾಸಕೇತರ ಬಂಧುಗಳು ಉಪಸ್ಥಿತರಿದ್ದರು.




























`
