ಪುತ್ತೂರು: ವಿಟ್ಲ ಠಾಣಾ ವ್ಯಾಪ್ತಿಯ ಉರಿಮಜಲು ಪರಿಸರದಲ್ಲಿ ಕಳೆದ ಕೆಲ ಸಮಯಗಳಿಂದ ಗಾಂಜಾ, ಎಂಡಿಎಂಎ ಮಾದಕ ದ್ರವ್ಯಗಳ ನಶೆಯಲ್ಲಿ ತೂರಾಡುತ್ತಿರುವ ಕೆಲ ಪುಂಡರು ಹಲ್ಲೆ-ಗಲಾಟೆ ನಡೆಸುತ್ತಾ ಸಾರ್ವಜನಿಕರ ಪಾಲಿಗೆ ಕಂಟಕರಾಗಿದ್ದರು.
ಅಶಾಂತಿಗೆ ಕಾರಣವಾಗುವ ಯುವಕರಿಗೆ ಡ್ರಗ್ಸ್ ವಿತರಣೆ ಮಾಡುವುದು ಯಾರೆಂಬ ಬಗ್ಗೆ ಸ್ಥಳೀಯರು ಸಾಕಷ್ಟು ಪತ್ತೆದಾರಿಕೆಯೂ ನಡೆಸಿದ್ದರು. ಈ ಕುರಿತು ಅಧಿಕೃತ ಮಾಹಿತಿ ಸಿಗುತ್ತಿದ್ದಂತೆ ಸಂಜೆ ಸ್ಥಳೀಯ ಯುವಕರ ತಂಡ ಅಳಕೆಮಜಲು ಫ್ಲ್ಯಾಟ್ ನಲ್ಲಿರುವ ಮಾಜಿ ಬಸ್ ಚಾಲಕ ಸಮದ್ ಎಂಬವನನ್ನು ಗುರುವಾರ ಉರಿಮಜಲು ಜಂಕ್ಷನ್ ಗೆ ಆಕ್ಟಿವಾದಲ್ಲಿ ಬರುತ್ತಿದ್ದಾಗ ತಡೆದು ವಿಚಾರಣೆ ನಡೆಸಿದ್ದಾರೆ. ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಆತ ನಾನೇ ಎಂಡಿಎಂಎ ಸಪ್ಲೈ ಮಾಡುತ್ತಿರುವುದು, ನನ್ನನ್ನೇನು ಮಾಡುತ್ತೀರಿ ಎಂದು ಉದ್ಧಟತನ ತೋರಿದ ಕಾರಣ ಆಕ್ರೋಶಗೊಂಡ ಯುವಕರು ಸಮದ್‌ಗೆ ಸರಿಯಾಗಿ ಗೂಸಾ ನೀಡಿದ್ದಾರೆ. ಯುವಕರಿಂದ ತಪ್ಪಿಸಿಕೊಂಡ ಆತ ಅಕ್ಟಿವಾ ಸ್ಕೂಟರ್ ಏರಿ ವಿಟ್ಲ ಕಡೆಗೆ ಪರಾರಿಯಾಗಿದ್ದಾನೆ.
`