ಕಾರ್ಕಳ: ಕಾರ್ಕಳ ತಾಲೂಕಿನ 2 ಕಡೆಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಲ್ಲೂರು ಗ್ರಾಮದ ಪರಪ್ಪಾಡಿ ಎಂಬಲ್ಲಿ ಸತೀಶ ಎಂಬಾತನು ಸೆ.4 ರಂದು ಲಿಂಗಮುದ್ರೆ ಎಂಬ ಸರಕಾರಿ ತೋಡಿನಿಂದ ಅಕ್ರಮವಾಗಿ ಮರಳನ್ನು ಕಳವುಗೈದು 402 ಟೆಂಪೋದಲ್ಲಿ ಸಾಗಿಸಿತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಮರಳು ಸಾಗಿಸುತ್ತಿದ್ದ ಟೆಂಪೋ ಸೇರಿದಂತೆ ಅದರಲ್ಲಿದ್ದ ಳಿ ಯುನಿಟ್ ಮರಳು , ಹಾರೆ ಮತ್ತು ಪ್ಲಾಸ್ಟಿಕ್ ಬುಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದೆಡೆ ಕಿಶೋರ್ ಎಂಬಾತ ಕಳವು ಮಾಡಿದ ಮರಳನ್ನು ಪರವಾನಿಗೆ ಇಲ್ಲದೆ ಟಿಪ್ಪರ್ ಲಾರಿಯಲ್ಲಿ ಹಿರ್ಗಾನ ಗ್ರಾಮದ ಹಿರ್ಗಾನ ಚರ್ಚ್ ಹತ್ತಿರ ಜೋಡುರಸ್ತೆ ಕಡೆಯಿಂದ ಅಜೆಕಾರ್ ಕಡೆಗೆ ಸಾಗಾಟ ಮಾಡುತ್ತಿದ್ದ ವೇಳೆ ಕಾರ್ಕಳ ನಗರ ಠಾಣಾ ಪೊಲೀಶರು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.