ಮಣಿಪಾಲ: ಮಣಿಪಾಲ ಕಡೆಯಿಂದ ಪರ್ಕಳ ಕಡೆ ಅತೀ ವೇಗವಾಗಿ ಹೋಗುತ್ತಿದ್ದ ಕಾರೊಂದು ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪರ್ಕಳ ಈಶ್ವರ ನಗರದ ರಸ್ತೆ ಬದಿಯಲ್ಲಿರುವ ಉಡುಪಿ ನಗರಸಭೆಗೆ ಸಂಬAಧಪಟ್ಟ ನೀರಿನ ಪಂಪ್ ಹೌಸ್ ನ ಒಳಗೆ ನುಗ್ಗಿದೆ. ಅದೃಷ್ಟವಶಾತ್ ಅಲ್ಲಿ ಮಲಗಿದ್ದ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.
ಸೋಮವಾರ ನಸುಕಿನ ವೇಳೆ ಈ ಘಟನೆ ನಡೆದಿದ್ದು, ಉಡುಪಿ ನೋಂದಣಿ ಸಂಖ್ಯೆ ಹೊಂದಿರುವ ಕಾರ್ ಇದಾಗಿದ್ದು ಅಪಘಾತಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಗೊಂಡಿದ್ದು ಪಂಪ್ ಹೌಸ್ ಕಟ್ಟಡಕ್ಕೂ ಹಾನಿಯಾಗಿದೆ.
ರಾಷ್ಟ್ರೀಯ ಹೆದ್ದಾರಿಗೆ ಸಂಬAಧಪಟ್ಟAತೆ ಇಲ್ಲಿ ಯಾವುದೇ ಸುರಕ್ಷತಾ ಬೇಲಿ ಇಲ್ಲದೆ ಇರುವುದೇ ಅಪಘಾಕ್ಕೆ ಕಾರಣವಾಗಿದೆ. ಈ ಪಂಪ್ ಹೌಸ್ ಮಣಿಪಾಲದ ಖಾಸಗಿಯವರು ಉಪಯೋಗಿಸುತ್ತಿದ್ದು. ಅಲ್ಲಿ ರಾಷ್ಟ್ರೀಯ ಹೆದ್ದಾರಿ ಅಡ್ಡಲಾಗಿ ರಸ್ತೆ ಅಗೆದು ಪಂಪ ಹೌಸಿನ ನೀರು ಬಳಕೆ ಮಾಡುತ್ತಿದ್ದಾರೆ. ಅಗೆದ ರಸ್ತೆಯನ್ನು ಮುಚ್ಚದೆ ಕಾಮಗಾರಿ ನಡೆಸಿದ್ದಾರೆ. ನಗರಸಭಾ ಪಂಪ್ ಹೌಸ್ ನ ಎದುರು ಕೃಷ್ಣ ಜನ್ಮಾಷ್ಟಮಿ ದಿನದಂದು ಇಲ್ಲಿ ಎರಡೆರಡು ಕಾರುಗಳು ಅಪಘಾತವಾಗಿತ್ತು.ಈಗ ಮತ್ತೆ ಅಪಘಾತ ಸಂಭವಿಸಿದೆ. ಮುಂದೆ ಇಂತಹ ಅವಘಡ ಸಂಭವಿಸದAತೆ ಸ್ಥಳದಲ್ಲಿ ಸೂಚನಾ ಫಲಕದೊಂದಿಗೆ ಸೂಕ್ತ ತಡೆ ಬೇಲಿ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.







in 
