ಬೆಂಗಳೂರು: ಭಾರತ್ ಮಾತಾ ಕಿ ಜೈ. ಇದು ಕೋಮುಗಲಭೆ ಸೃಷ್ಟಿಸುವ ಘೋಷಣೆ ಎಂದು ಹಿಂದೂ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಈ ವಿಶೇಷ ವಿಚಾರಣೆ ನಡೆದಿದ್ದು ದಕ್ಷಿಣ ಕನ್ನಡದ ಬೋಳಿಯಾರ್ನಲ್ಲಿ ನಡೆದ ಚಾಕು ಇರಿತ ಪ್ರಕರಣ ವಿಚಾರಣೆಯಲ್ಲಿ. ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ ಹಿಂದೂ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್, ಈ ಘೋಷಣೆ ದೇಶವನ್ನು ಒಟ್ಟುಗೂಡಿಸುವ ಘೋಷಣೆ. ಇದು ದ್ವೇಷದ ಘೋಷಣೆಯಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಧಾನಿ ಮೋದ್ರಿವರು 3ನೇ ಬಾರಿಗೆ ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನ ಜೂನ್ 9 ರಂದು ಕಾರ್ಯಕ್ರಮದ ಲೈವ್ ಹಲೆವೆಡೆ ಸ್ಕ್ರೀನ್ ಮೇಲೆ ಪ್ರಸಾರ ಮಾಡಲಾಗಿತ್ತು. ದಕ್ಷಿಣ ಕನ್ನಡದ ಬೋಳಿಯಾರ್ ಬಳಿ ಹಿಂದೂ ಕಾರ್ಯಕರ್ತರು ಮೋದಿ ಪ್ರಮಾಣವಚನ ಸಮಾರಂಭದ ಲೈವ್ ವೀಕ್ಷಿಸಿ ಮರಳುತ್ತಿದ್ದ ವೇಳೆ ಭಾರತ್ ಮಾತಾ ಕಿ ಜೈ ಘೋಷಣೆ ಕೂಗುತ್ತಾ ಸಾಗಿದ್ದಾರೆ.
ಆದರೆ ಬೋಳಿಯಾರ್ ಬಳಿ ಮಸೀದಿ ಬಳಿ ಇದ್ದ ಅನ್ಯಕೋಮಿನ ಯುವಕರನ್ನು ಈ ಘೋಷಣೆ ಕೆರಳಿಸಿತ್ತು. ಹಿಂದೂ ಕಾರ್ಯಕರ್ತರ ಚೇಸ್ ಮಾಡಿ ಹಲ್ಲೆ ಮಾಡಿದ ಅನ್ಯಕೋಮಿನ ಗುಂಪು, ಓರ್ವನಿಗೆ ಚಾಕುವಿನಿಂದ ಇರಿದಿತ್ತು. ಘಟನೆ ಮರುದಿನ ಪಿಕೆ ಅಬ್ದುಲ್ಲಾ ಎನ್ನುವ ವ್ಯಕ್ತಿ ಹಿಂದೂ ಕಾರ್ಯಕರ್ತರ ವಿರುದ್ಧ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮಸೀದಿ ಎದುರು ಭಾರತ್ ಮಾತಾ ಕಿ ಜೈ ಘೋಷಣೆ ಕೂಗುವ ಮೂಲಕ ಕೋಮುದ್ವೇಷ ಹರಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಹೀಗಾಗಿ ಪೊಲೀಸರು ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಈ ಘೋಷಣೆ ಕೋಮು ದ್ವೇಷ ಹರಡುವುದಿಲ್ಲ ಎಂದು ಕಿವಿ ಮಾತು ಹೇಳಿ ಪ್ರಕರಣವನ್ನು ರದ್ದುಗೊಳಿಸಿದೆ. ಇದರಿಂದ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿ ದೇಶದಲ್ಲಿ ದಾಖಲಾಗಿದ್ದ ಮೊದಲ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ.
ಅರ್ಜಿದಾರರು 153ಎ ಅಡಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಇಲ್ಲಿ 153ಎ ಅನ್ವಯವಾಗುವಂತ ಯಾವುದೇ ಅಂಶಗಳು ದೂರಿನಲ್ಲಿ ಕಾಣುತ್ತಿಲ್ಲ. ಭಾರತ್ ಮಾತಾ ಕಿ ಜೈ ಕೋಮು ದ್ವೇಷವನ್ನು ಹೇಗೆ ಹರಡುತ್ತದೆ. ಇದು ದ್ವೇಷ ಭಾವನೆ ಮೂಡಿಸುವ ಘೋಷಣೆಯಲ್ಲ ಎಂದು ಜಸ್ಟೀಸ್ ಎಂ ನಾಗಪ್ರಸನ್ನ ಅವರಿದ್ದ ಪೀಠ ಹೇಳಿದೆ.







in 
