ಕಾರ್ಕಳ: ಬೈಕ್ ಹಾಗೂ ಕ್ಯಾಂಟರ್ ಲಾರಿ ನಡುವೆಮು ಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ನಲ್ಲೂರು ಪಾಜೆಗುಡ್ಡೆ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಭೀಕರ ಅಪಘಾತದಲ್ಲಿ ಬೈಕ್ ಸವಾರ ನಲ್ಲೂರು ಗ್ರಾಮದ ಸುರೇಶ್ ಆಚಾರ್ಯ ಹಾಗೂ ಮೂವರು ಮಕ್ಕಳಾದ
ಸಮೀಕ್ಷಾ(7)ಸುಶ್ಮಿತಾ( 5) ಹಾಗೂ ಸುಶಾಂತ್ (2) ದಾರುಣವಾಗಿ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಪತ್ನಿ ಮೀನಾಕ್ಷಿ (36) ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ .
ಸುರೇಶ್ ಆಚಾರ್ಯ ಅವರು ತನ್ನ ಪತ್ನಿ ಮನೆಯಾದ ವೇಣೂರಿನಿಂದ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆಹೊಸ್ಮಾರು ಮಾರ್ಗವಾಗಿ ನಲ್ಲೂರಿಗೆ ಬರುತ್ತಿದ್ದಾಗ ಬಜಗೋಳಿ ಕಡೆಯಿಂದ ಹೊಸ್ಮಾರು ಕಡೆಗೆ ಅತಿವೇಗವಾಗಿ ಬರುತ್ತಿದ್ದ ಕ್ಯಾಂಟರ್ ಲಾರಿ ಪಾಜೆಗುಡ್ಡೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬೈಕಿಗೆ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಬೈಕ್ ಸವಾರ ಸುರೇಶ್ ಹಾಗೂ ಮೂವರು ಮಕ್ಕಳ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತದಿಂದ ಶವಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯ ಮನಕಲುಕುವಂತಿತ್ತು
ಘಟನಾಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳಕ್ಕಾಗಮಿಸಿದ ಹಿಂದೂ ಜಾಗರಣ ವೇದಿಕೆಯ ಮುಖಂಡ ಹಾಗೂ ಸಮಾಜ ಸೇವಕ ಗುರುಪ್ರಸಾದ್ ನಾರಾವಿ,ಸ್ಥಳೀಯರಾದ ಕೀರ್ತಿ ಜೈನ್ ನಲ್ಲೂರು ಹಾಗೂ ಸುಮಿತ್ ಮಡಿವಾಳ ಮುಂತಾದವರು ಗಾಯಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು ಹಾಗೂ ಮೃತಪಟ್ಟವರ ಶವಗಳನ್ನು ಸಾಗಿಸಲು ವಾಹನದ ವ್ಯವಸ್ಥೆ ಕಲ್ಪಿಸಿದರು.
in