Share this news

ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸೋದರ ಮುಮ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮುಮ್ತಾಜ್ ಅಲಿ ಮೃತದೇಹ ಪತ್ತೆಯಾಗಿದೆ. ಸದ್ಯ ಸತತ 28 ಗಂಟೆಗಳ ಕಾರ್ಯಾಚರಣೆ ಬಳಿಕ ಮಂಗಳೂರಿನ ಕೂಳೂರಿನ ಸೇತುವೆ ಬಳಿ ಮುಮ್ತಾಜ್ ಅಲಿ ಶವ ಪತ್ತೆಯಾಗಿದೆ. ಮುಳುಗು‌ ತಜ್ಞರು ಮೃತದೇಹವನ್ನು ಹೊರತೆಗೆದಿದ್ದು ಮೃತದೇಹ ಕಂಡು ಮಾಜಿ ಶಾಸಕ ಮೊಯಿದ್ದೀನ್ ಬಾವಾ ಕಣ್ಣೀರು ಹಾಕಿದ್ದಾರೆ.

ನಿನ್ನೆ ಮುಂಜಾನೆ 3 ಗಂಟೆ ಸುಮಾರಿಗೆ ಮನೆಯಿಂದ ಹೋಗಿರುವ ಮುಮ್ತಾಜ್ ಅವರ ಕಾರು ಕುಳೂರಿನ ಸೇತುವೆ ಮೇಲೆ ಪತ್ತೆಯಾಗಿತ್ತು. ಕಾರು ಡ್ಯಾಮೇಜ್ ಆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅಗರ್ವಾಲ್ ಭೇಟಿ ನೀಡಿದ್ದಾರೆ. ನದಿಯಲ್ಲಿ ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ತಂಡಗಳಿಂದ ನಿನ್ನೆಯಿಂದ ತಪಾಸಣೆ ನಡೆಸಲಾಗಿತ್ತು. ಆದರೆ ಇಂದು ನದಿಯಲ್ಲಿ ಮುಮ್ತಾಜ್ ಅಲಿ ಶವ ಪತ್ತೆಯಾಗಿದೆ.

ಈ ಪ್ರಕರಣದ ಹಿಂದೆ ಮಹಿಳೆಯ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗಿದ್ದು, ಸುರತ್ಕಲ್ ಕೃಷ್ಣಾಪುರ ನಿವಾಸಿ ಮಹಿಳೆ ಕಳೆದ ಒಂದು ವರ್ಷದಿಂದ ಮುಮ್ತಾಜ್ ಅಲಿ ಗೆ ಬ್ಲಾಕ್ ಮೇಲ್ ಮಾಡುತ್ತಿದ್ದಳು ಎನ್ನಲಾಗಿದೆ. ಮುಮ್ತಾಜ್ ಅಲಿ ಖಾಸಗಿ ವಿಡಿಯೋ ಇಟ್ಟುಕೊಂಡು ಮದುವೆ ಆಗುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದರು. ಈ ವಿಚಾರ ಮನೆಯವರಿಗೆ ಗೊತ್ತಾಗಿ ನಿತ್ಯ ಕಿರಿಕಿರಿಯಾಗುತ್ತಿತ್ತು. ಇನ್ನು ಇತ್ತೀಚೆಗೆ ಮಸೀದಿ ಕಮಿಟಿ ವಿಚಾರದಲ್ಲಿ ಕಾಟಿಪಳ್ಳದ ಮೂವರು ಯುವಕರು ಆ ಮಹಿಳೆಗೆ ಸಾಥ್ ನೀಡಿ ಹೆಸರು ಕೆಡಿಸಲು ತಯಾರಿ ನಡೆಸಿದ್ದರು. ಇದ್ರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಸದ್ಯ ಘಟನೆ ಸಂಬAಧ 6 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

 

Leave a Reply

Your email address will not be published. Required fields are marked *