Share this news

ಮೈಸೂರು: ಬಾಗಲಕೋಟೆ ತಾಲೂಕಿನ ಗದ್ದನಕೇರಿ ಬಳಿ ಇರುವ ರಾಮಾರೂಢ ಮಠದ ಸ್ವಾಮೀಜಿ ಅವರನ್ನು ಹೆದರಿಸಿ ಟ ಕೋಟಿ ಹಣ ವಸೂಲು ಮಾಡಿದ್ದ ರೌಡಿಶೀಟರ್ ಪ್ರಕಾಶ ಮುಧೋಳ ಮೈಸೂರು ದಸರಾ ವೇಳೆ ಗಣ್ಯರ ಸಾಲಿನಲ್ಲಿ ನಾಣಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಶಿವರಾಜ ತಂಗಡಗಿ, ಲಕ್ಷ್ಮೀ ಹೆಬ್ಬಾಳ್ಕರ್ ಕುಳಿತಿದ್ದ ವಿಐಪಿ ಸಾಲಿನಲ್ಲಿ ಪ್ರಕಾಶ್ ಮುಧೋಳ ಕುಳಿತಿದ್ದರು. ಮೈಸೂರು ಜಿಲ್ಲಾಡಳಿತದ ನಡೆಯ ವಿರುದ್ಧ ಬಾಗಲಕೋಟೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ದಸರಾ ಕಾರ್ಯಕ್ರಮದ ವೇದಿಕೆ ಮೇಲೆ ಗಣ್ಯರ ಸಾಲಿನಲ್ಲಿ ರೌಡಿಶೀಟರ್ ಪ್ರಕಾಶ್ ಮುಧೋಳ ಕಾಣಿಸಿಕೊಂಡರು. ಡಿಸಿಎಂ ಡಿಕೆ ಶಿವಕುಮಾರ್, ಎಂಎಲ್‌ಸಿ ಯತೀಂದ್ರ ಜತೆಗೂ ಪ್ರಕಾಶ್ ಮುಧೋಳ ಸೆಲ್ಫಿ ತೆಗೆದುಕೊಂಡಿದ್ದಾರೆ. ಗಣ್ಯರ ಸಾಲಲ್ಲಿ ಪ್ರಕಾಶ್ ಮುಧೋಳ ಆಸನ ಪಡೆದಿದ್ದೇಗೆ ಎಂಬ ಪ್ರಶ್ನೆ ಎದ್ದಿದೆ. ರೌಡಿ ಶೀಟರ್ ವ್ಯಕ್ತಿಯನ್ನು ಗಣ್ಯರ ಸಾಲಲ್ಲಿ ಹೇಗೆ ಕೂರಿಸಿದರು ಎಂದು ಬಾಗಲಕೋಟೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಬಾಗಲಕೋಟೆ ತಾಲೂಕಿನ ಸೀಮಿಕೇರಿ ರಾಮಾರೂಢ ಮಠದ ಪರಮರಾಮಾರೂಢಶ್ರೀಗೆ ರೌಡಿಶೀಟರ್ ಪ್ರಕಾಶ್ ಮುಧೋಳ ಬೆದರಿಕೆ ಹಾಕಿ 1 ಕೋಟಿ ರೂ. ವಸೂಲಿ ಮಾಡಿದ್ದ ಹಾಗೂ ಎಡಿಜಿಪಿ, ಐಜಿಪಿ ಹೆಸರಲ್ಲಿ ಕರೆ ಮಾಡಿ ವಂಚನೆ ಮಾಡಿದ ಎನ್ನುವ ಆರೋಪ ಈತನ ಮೇಲಿದೆ. ಈ ಸಂಬAಧ ಬಾಗಲಕೋಟೆ ಸಿಇಎನ್ ಠಾಣೆ ಪೊಲೀಸರು ಪ್ರಕಾಶ್‌ನನ್ನು ಬಂಧಿಸಿದ್ದರು. ಸದ್ಯ 4 ದಿನದ ಹಿಂದೆ ಪ್ರಕಾಶ್ ಮುಧೋಳ ಜಾಮೀನಿನ ಮೇಲೆ ಹೊರ ಬಂದಿದ್ದಾನೆ. ಇದೀಗ ದಸರಾ ಕಾರ್ಯಕ್ರಮದಲ್ಲಿ ಗಣ್ಯರ ಜತೆ ಭಾಗವಹಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ

2023ರ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಕಾಶ್ ಸ್ಪರ್ಧಿಸಿದ್ದ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೆಸರಿನಲ್ಲಿ ವಂಚನೆಗೆ ಯತ್ನಿಸಿದ್ದ. ಬಾಗಲಕೋಟೆ ಉಸ್ತುವಾರಿ ಸಚಿವ ತಿಮ್ಮಾಪುರ ಅವರ ಅಳಿಯ ಎಂದು ಕಾರ್ ಲೋನ್ ಪಡೆಯಲು ಯತ್ನಿಸಿದ್ದ. ವಂಚನೆ, ಸುಲಿಗೆ ಸೇರಿ ಪ್ರಕಾಶ್ ಮುಧೋಳ ವಿರುದ್ಧ ಒಟ್ಟು 11 ಕೇಸ್‌ಗಳಿವೆ.

 

 

Leave a Reply

Your email address will not be published. Required fields are marked *