Share this news

ಕಾರ್ಕಳ: ಕಾರ್ಕಳ ತಾಲೂಕಿನಾದ್ಯಂತ ಇತ್ತೀಚಿಗೆ ಅಡಿಕೆ ತೋಟಗಳಲ್ಲಿ ಚಂಡೆಕೊಳೆ ರೋಗ (crown rot) ಕಾಣಿಸಿಕೊಳ್ಳುತ್ತಿದ್ದು ದೊಡ್ಡ ಪ್ರಮಾಣದಲ್ಲಿ ರೈತರಿಗೆ ನಷ್ಟವನ್ನುಂಟು ಮಾಡುತ್ತಿದೆ. ರೋಗ ಭಾದಿತ ಮರಗಳು ಕ್ರಮೇಣ ಸತ್ತು ಹೋಗುವುದರಿಂದ ರೈತರಿಗೆ ಹೆಚ್ಚು ನಷ್ಟ ಸಂಭವಿಸುತ್ತಿದೆ. ಅಡಿಕೆ ಕೊಳೆ ರೋಗಕ್ಕೆ ಕಾರಣವಾಗುವ ಶೀಲೀಂದ್ರ ಪೈಟೋಪ್ತೆರಾಮಿಡಿಯೈ ಶೀಲೀಂದ್ರವೇ ಈ ರೋಗಕ್ಕೂ ಕಾರಣವಾಗಿದ್ದು, ಹೆಚ್ಚು ಕಾಯಿ ಕೊಳೆ ಭಾದಿತ ತೋಟಗಳಲ್ಲಿ ಈ ರೋಗ ಕಂಡು ಬರುತ್ತದೆ.

ಈ ರೋಗವು ಅಗಸ್ಟ್- ಸೆಪ್ಟೆಂಬರ್‌ನಿAದ ಪ್ರಾರಂಭವಾಗಿ ತೋಟಗಳಲ್ಲಿ ಡಿಸೆಂಬರ್-ಜನವರಿ ವರೆಗೂ ಕಂಡು ಬರುತ್ತದೆ. ಬಿಸಿಲು-ಮಳೆ, ರಾತ್ರಿಯ ಕಡಿಮೆ ಉಷ್ಣಾಂಶ ಹಾಗೂ ಮಂಜು ಬೀಳುವಿಕೆ ಈ ರೋಗದ ಶೀಲೀಂದ್ರದ ಬೆಳೆವಣಿಗೆಗೆ ಸಹಕಾರಿ. ರೋಗದ ಪ್ರಾರಂಭದ ಲಕ್ಷ್ಮಣವಾಗಿ ಹಸಿರು ಗರಿಗಳು ಜೋತು ಬೀಳುತ್ತವೆ. ಕ್ರಮೇಣ ಅವುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಸುಳಿ ಗರಿ ತುಂಬಾ ಸಮಯ ಹಸಿರಾಗಿ ಉಳಿದು ತದನಂತರ ಒಣಗಿ ಚಂಡೆ ಭಾಗ ಕಳಚಿ ಬೀಳುತ್ತದೆ. ಅಡಿಕೆ ಹಾಳೆಯ ಒಳ ಬುಡ ಭಾಗದಲ್ಲಿ ಕಂದು ಬಣ್ಣದ ಭಾಗ ಕಾಣಬಹುದು. ಅಡಿಕೆ ಹಾಳೆಯು ಕಾಂಡಕ್ಕೆ ಅಂಟಿಕೊಳ್ಳುವ ಭಾಗದಲ್ಲಿ ಶೀಲೀಂದ್ರ ಪ್ರವೇಶಿಸಿ ಕಾಂಡದ ಒಳಭಾಗವನ್ನು ಪೂರ್ಣ ಕೊಳೆಯುವಂತೆ ಮಾಡುತ್ತದೆ.

ರೋಗ ನಿಯಂತ್ರಣ:
ಈ ರೋಗವನ್ನು ಸಮಗ್ರ ನಿಯಂತ್ರಣ ಕ್ರಮಗಳಿಂದ ನಿರ್ವಹಣೆ ಮಾಡಬಹುದಾಗಿದೆ. ಈ ರೋಗವು ಸಾಮಾನ್ಯವಾಗಿ ಹಳೆಯ ಅಡಿಕೆ ಮರಗಳಲ್ಲಿಯೇ ಹೆಚ್ಚಾಗಿ ಕಂಡುಬರುತ್ತಿದ್ದು ಅಸಮರ್ಪಕ ಬೊರ್ಡೊ ಸಿಂಪರಣೆ ಸಹ ಒಂದು ಕಾರಣವಾಗಿರಬಹುದು. ಅಡಿಕೆ ಕೊಳೆ ರೋಗ ನಿಯಂತ್ರಣ ಕ್ರಮಗಳನ್ನು ಪೂರ್ಣವಾಗಿ ಅನುಸರಿಸುವ ರೈತರ ತೋಟಗಳಲ್ಲಿ ಈ
ರೋಗದ ಭಾದೆ ಕಡಿಮೆ. ಪ್ರಾರಂಭಿಕ ಹಂತದಲ್ಲಿ ರೋಗ ಭಾದಿತ ಮರಗಳನ್ನು ಗುರುತಿಸಿ ನಿಯಂತ್ರಣ ಕ್ರಮಗಳನ್ನು ಅನುಸರಿಸಿದರೆ ಮರಗಳನ್ನು ಉಳಿಸಿಕೊಳ್ಳಬಹುದಾಗಿದೆ.
1. ಸಮರ್ಪಕ ಬಸಿಗಾಲುವೆಗಳ ನಿರ್ವಹಣೆ.
2. ಮಣ್ಣು ಪರೀಕ್ಷೆ ಆಧಾರದಲ್ಲಿ ಶೀಫಾರಸ್ಸು ಮಾಡಿದ ಪೋಷಕಾಂಶಗಳನ್ನು ನಿಯಮಿತವಾಗಿ ನೀಡುವುದು.
3. ಬೇವಿನ ಹಿಂಡಿ ಹಾಗೂ ಟ್ರೈಕೋಡರ್ಮಾ ಮಿಶ್ರಣವನ್ನು ಮಳೆಗಾಲದ ಪೂರ್ವದಲ್ಲಿ ಅಡಿಕೆ ಮರಗಳಿಗೆ ನೀಡುವುದು.
4. ಕೊಳೆರೋಗ ಭಾದಿತ ಸಿಂಗಾರಗಳನ್ನು ಸಂಗ್ರಹಿಸಿ ಸುಡುವುದು.
5. ಚಂಡೆ ಕೊಳೆಭಾದೆಯಿಂದ ಸತ್ತಂತಹ ಮರಗಳನ್ನು ಕತ್ತರಿಸಿ ಸುಡುವುದು.
6. ಪ್ರಾರಂಭಿಕ ಹಂತದ ರೋಗ ಲಕ್ಷಣ ಹೊಂದಿರುವ (ಹಸಿರು ಗರಿಗಳು ಜೋತು ಬೀಳುವುದು) ಮರಗಳ ಕುಬೆ ಭಾಗಕ್ಕೆ ಶೇ.
10ರ ಬೋರ್ಡೊ ಪೇಸ್ಟ್ ಹಚ್ಚುವುದು ಹಾಗೂ ಸುತ್ತಲಿನ ಮರಗಳ ಕುಬೆ ಭಾಗಕ್ಕೆ ಶೇ. 1 ರ ಬೋರ್ಡೊ ಸಿಂಪರಣೆ
ಮಾಡುವುದು.
7. ಪ್ರಾರಂಭಿಕ ಹಂತದ ರೋಗ ಲಕ್ಷಣ ಹೊಂದಿರುವ ಮರಗಳ ಎಲೆಗಳಿಗೆ ಮೆಟಾಲಾಕ್ಸಿಲ್ 35% – 1.50 ಗ್ರಾಂ 1 ಲೀಟರ್
ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದು. ಸಿಂಪರಣೆ ಮಾಡಿದ ತರುವಾಯು ಕನಿಷ್ಠ 3-4 ಗಂಟೆಗಳ ಬಿಸಿಲು ಅವಶ್ಯ.
8. ರೈತರು ನಿಯಮಿತವಾಗಿ ಅಡಿಕೆ ಕೊಳೆ ನಿಯಂತ್ರಣಕ್ಕೆ ಸಿಂಪಡಿಸುವ ಬೋರ್ಡೊ ದ್ರಾವಣವನ್ನು ಮಳೆ ಪ್ರಾರಂಭವಾದ
ನAತರದಲ್ಲಿ ಮಾತ್ರ ನೀಡುವುದಲ್ಲದೇ, ಮಳೆಗಾಲ ಪ್ರಾರಂಭದ ಪೂರ್ವದಲ್ಲಿ ನೀಡಬೇಕು ಹಾಗೂ 2-3ನೇ ಬಾರಿ
ಬೋರ್ಡೊ ಸಿಂಪರಣೆ ಸಮಯದಲ್ಲಿ ಕುಬೆ ಭಾಗಕ್ಕೂ ಸಿಂಪರಣೆ ಮಾಡುವುದು ಸಹಕಾರಿ ಎಂದು ತೋಟಗಾರಿಕೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *