Share this news

ಉಡುಪಿ :  ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಜರುಗಿದ  ಉಡುಪಿ ಉಚ್ಚಿಲ ದಸರಾ ಕಾರ್ಯಕ್ರಮದಲ್ಲಿ ಮುಸ್ಲಿಂ ವ್ಯಕ್ತಿಗೆ ಸನ್ಮಾನ ಮಾಡಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಸಾದ್ ರಾಜ್ ಕಾಂಚನ್ ರವರ ಫೋಟೋ ವನ್ನು ದುರುದ್ದೇಶಪೂರಕವಾಗಿ ಎಡಿಟ್ ಮಾಡಿ ಕೋಮುದ್ವೇಷ ಹಾಗೂ ಮಾನಹಾನಿ ಪೋಸ್ಟ್ ಮಾಡಿದವರ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್, ಉಡುಪಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಪ್ರಸಾದರಾಜ್ ಕಾಂಚನ್ ಅಭಿಮಾನಿಗಳು ಹಾಗೂ ಹಿತೈಷಿಗಳು, ಜಿಲ್ಲಾ ಮೀನುಗಾರರ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬ್ರಹ್ಮಾವರ ಬ್ಲಾಕ್ ಮೀನುಗಾರರ ಕಾಂಗ್ರೆಸ್ ಅಧ್ಯಕ್ಷ ನವೀನ್ ಮರಕಲ, ಬ್ರಹ್ಮಾವರ ಬ್ಲಾಕ್ ಹಿಂದುಳಿದ ವರ್ಗಗಳ ಅಧ್ಯಕ್ಷ ಕುಮಾರ್ ಸುವರ್ಣ ಬೈಕಾಡಿ, ರಾಜ್ಯ ಮೀನುಗಾರರ ಕಾಂಗ್ರೆಸ್ ಪದಾಧಿಕಾರಿಗಳಾದ ರಮೇಶ್ ತಿಂಗಳಾಯ, ಅಖಿಲೇಶ್ ಕೋಟ್ಯಾನ್ ಕಟಪಾಡಿ, ಮುಖಂಡರುಗಳಾದ ಮನೋಜ್ ಕರ್ಕೇರ, ಉಪೇಂದ್ರ ಮೆಂಡನ್, ನಾಗೇಂದ್ರ ಮೆಂಡನ್, ಪಾಂಡುರಂಗ ಕೋಟ್ಯಾನ್ , ಸಂತೋಷ್ ಪಡುಬಿದ್ರಿ , ರಾಮಪ್ಪ ಸಾಲಿಯಾನ್, ಶುಧರ್ಶನ್, ಆನಂದ ಕಾಂಚನ್, ಪದ್ಮನಾಭ ಬಂಗೇರ, ಕಿರಣ್ ಕಕುಮಾರ್, ಸುಧೀರ್ ಶೆಟ್ಟಿ, ವಿಲಾಸ್, ಮಾದವ, ಸೂರಜ್, ಬಂಧು ಕಾಂಚನ್, ಶರತ್ ಕುಂದರ್, ಸತೀಶ್ ಸಾಲ್ಯಾನ್, ರತ್ನಾಕರ ಮೊಗವೀರ ಹಾವಂಜೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *