ಕಿನ್ನಿಗೋಳಿ : ಮರದ ರೆಂಬೆಯೊಂದು ನಿಲ್ಲಿಸಿದ್ದ ಬೈಕ್ ಮೇಲೆ ಬಿದ್ದ ಘಟನೆ ಕಿನ್ನಿಗೋಳಿಯ ಮುಖ್ಯರಸ್ತೆಯ ರಾಜಾಂಗಣದ ಬಳಿ ನಡೆದಿದೆ.
ಮುಖ್ಯ ರಸ್ತೆಯ ರಾಜಾಂಗಣ ಬಳಿಯ ಕಬ್ಬಿಣದ ಕೆಲಸಗಾರ ಸುಧಾಕರ ಆಚಾರ್ಯ ಕೆಲಸದ ಕೋಣೆ ಇದ್ದು, ಬೆಳ್ಳಿಗ್ಗೆ ಸುಧಾಕರ ಆಚಾರ್ಯ ಅವರು ತಮ್ಮ ಬೈಕ್ ನಿಲ್ಲಿಸಿ ಒಳ ಹೋಗುವ ಸಂದರ್ಭ ಮರದ ರೆಂಬೆ ಬೈಕ್ ಮೇಲೆ ಬಿದ್ದಿದೆ, ಸ್ವಲ್ಪ ಎಡಕ್ಕೆ ಅಥವ ಬಲ ಬದಿಗೆ ಬಿದ್ದಿದ್ದಲ್ಲಿ ಮುಖ್ಯ ರಸ್ಥೆ ಅಥವಾ ಸುಧಾಕರ ಆಚಾರ್ಯರ ಅಂಗಡಿ ಮೇಲೆ ಬೀಳುವ ಸಾದ್ಯತೆ ಹೆಚ್ಚಾಗಿತ್ತು ಆದರೆ ಸಂಭಾವ್ಯ ದೊಡ್ಡ ಅನಾಹುತವೊಂದು ತಪ್ಪಿದೆ. ಎನ್ನಲಾಗಿದೆ.
ಸ್ವಲ್ಪ ಮೊದಲು ಇಬ್ಬರು ಕೆಲಸಗಾರರು ತಮ್ಮ ಕಬ್ಬಿಣದ ಹಾರೆ ಪಿಕ್ಕಾಸು ಪಡೆದು ಕೊಂಡು ಹೋಗಿದ್ದರು ಎನ್ನಲಾಗಿದೆ .
ಸ್ಥಳಕ್ಕೆ ಕೆಮ್ರಾಲ್ ಪಂಚಾಯತ್ ಅಧ್ಯಕ್ಷ ಮೈಯದಿ, ಪಿಡಿಒ ಅರುಣ್ ಪ್ರದೀಪ್ ಡಿ’ಸೋಜಾ, ಕಾರ್ಯದರ್ಶಿ ಕೇಶವ ದೇವಾಡಿಗ ಪಂಚಾಯತ್ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.