ಕಾರ್ಕಳ: ಹಿಂದೂ ಹೆಣ್ಣುಮಕ್ಕಳ ಬಗ್ಗೆ ಅಸಹ್ಯವಾಗಿ ಮಾತನಾಡಿದ ಉಪವಲಯ ಅರಣ್ಯ ಅಧಿಕಾರಿಯಾಗಿರುವ ಸಂಜೀವ ಪೂಜಾರಿ ಎಂಬವರ ವಿರುದ್ದ ಕಾನೂನು ಕ್ರಮ ಜರುಗಿಸದಿದ್ದರೆ ಸಾರ್ವಜನಿಕವಾಗಿ ಪೊರಕೆ ಸೇವೆ ಮಾಡಬೇಕಾದೀತು ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ಎಚ್ಚರಿಕೆ ನೀಡಿದ್ದಾರೆ.
ತನ್ನ ಮನೆಯ ಹೆಣ್ಣು ಮಕ್ಕಳನ್ನು ಅಸಹ್ಯ ರೀತಿಯಲ್ಲಿ ನೋಡುವ ಮನಸ್ಥಿತಿ ಇರುವಂತಹ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯಿಂದ ಮಾತ್ರ ಇಂತಹ ಮಾತುಗಳು ಬರುವಂತಹದ್ದು ಒಬ್ಬ ಸರಕಾರಿ ಉನ್ನತ ಮಟ್ಟದ ಹುದ್ದೆಗಳಲ್ಲಿ ಇರುವಂತಹ ವ್ಯಕ್ತಿಯ ನಾಲಗೆಯಲ್ಲಿ ಇಂತಹ ಮಾತುಗಳು ಸಂಸ್ಕಾರ ಹೀನ ಮಾತುಗಳು ಬರುವುದು ಶೋಭೆಯಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಸಂಸ್ಕೃತಿಯಲ್ಲಿ ಸ್ತ್ರೀ ಯನ್ನು ಮಾತೆಯ ರೂಪದಲ್ಲಿ ನೋಡುತ್ತಾರೆ.ಇವರಂತಹ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ವ್ಯಕ್ತಿಯ ಬಳಿ ಹೇಳಿಸಿಕೊಳ್ಳುವ ಪರಿಸ್ಥಿತಿ ನಮ್ಮ ಹಿಂದೂ ಹೆಣ್ಣುಮಕ್ಕಳಿಗೆ ಬಂದಿಲ್ಲ. ಬಿಲ್ಲವ ಸಮಾಜದ ಮಾತೃಶಕ್ತಿ ಮತ್ತು ಭಜನಾ ಮಂಡಳಿಯ ಮಾತೃ ಶಕ್ತಿಗೆ ಮಾಡಿರುವುದು ಹಾಗೂ ಹೆಣ್ಣು ಮಕ್ಕಳ ಚಾರಿತ್ರ್ಯವಧೆ ಮಾಡಿರುವುದು ಖಂಡನೀಯ. ಈತನ ವಿರುದ್ಧ ಪೊಲೀಸ್ ಇಲಾಖೆ ಸುಮೋಟೋ ಕೇಸ್ ದಾಖಲಿಸಿ ಕೂಡಲೇ ಬಂಧಿಸಬೇಕು ಹಾಗೂ ಸರಕಾರ ಸಂಜೀವ ಪೂಜಾರಿ ಕಾಣಿಯೂರು ಅವರನ್ನು ಕೆಲಸದಿಂದ ವಜಾ ಮಾಡಿ ಬಿಲ್ಲವ ಸಮಾಜದ ಹೆಣ್ಣು ಮಕ್ಕಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಒಂದು ವೇಳೆ ಇಲಾಖೆಯು ಈತನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳದೆ , ಬಂಧಿಸದೆ ಬಿಟ್ಟರೆ ಹಿಂದೂ ಸಮಾಜದ ಹೆಣ್ಣು ಮಕ್ಕಳು ನೇರ ಆತನಿಗೆ ಪೂರಕೆ ಸೇವೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.