Share this news

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣ ಮತ್ತು ಮುಡಾ ಹಗರಣದ ನಡುವೆ ಇದೀಗ ಕರ್ನಾಟಕ ರಾಜ್ಯ ಕೋ ಆಪರೇಟಿವ್ ಸೊಸೈಟಿಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದಿದೆ. ಸೊಸೈಟಿಯಲ್ಲಿ ಬರೋಬ್ಬರಿ 19.34 ಕೋಟಿ ರೂ, ಹಣ ಅಕ್ರಮ ವರ್ಗಾವಣೆಯಾಗಿದೆ ಎಂದು ತಿಳಿದುಬಂದಿದ್ದು, ಈ ಸಂಬAಧ ಸೊಸೈಟಿಯ ಪ್ರಭಾರಿ ಸಿಇಒ ಸೇರಿ 6 ಒಟ್ಟು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ನಡೆಸಿದ ಸಭೆಯಲ್ಲಿ ಈ ಅಕ್ರಮ ಬೆಳಕಿಗೆ ಬಂದಿದೆ. 2017ರಿಂದ 2023ರ ವರೆಗೆ ಸೊಸೈಟಿಯಲ್ಲಿ ಎಫ್‌ಡಿ ರೂಪದಲ್ಲಿದ್ದ 19.34 ಕೋಟಿ ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಸೊಸೈಟಿಯ ಪ್ರಭಾರ ಸಿಇಒ ಆಶಾಲತಾ ಪತಿ ಸೋಮಶೇಖರ್ ಸೇರಿ ಖಾಸಗಿಯವರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಬಳಿಕ 101 ಎಫ್‌ಡಿಡಿ ಖಾತೆಗಳ ನಕಲಿ ಠೇವಣಿ ಬಾಂಡ್ ಸೃಷ್ಟಿಸಿದ್ದಾರೆ. ಈ ಮೂಲಕ ಅಕ್ರಮ ಮುಚ್ಚಿಡಲು ನಕಲಿ ಖಾತೆ ಸೃಷ್ಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಧ್ಯಕ್ಷರ ಸಹಿಯನ್ನೂ ಕೂಡ ನಕಲಿ ಮಾಡಿರುವ ಆರೋಪ ಕೇಳಿಬಂದಿದೆ.

ಸಹಕಾರ ಸಚಿವ ರಾಜಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆದ ಸಂದರ್ಭ ಆಶಾಲತಾ ಅವರು ಸೊಸೈಟಿ ಹಣವನ್ನು ಬಿಡಿಸಿಸಿ, ಅಪೆಕ್ಸ್ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವುದಾಗಿ ಹೇಳಿದ್ದಾರೆ. ಆದರೆ ಪರಿಶೀಲನೆ ವೇಳೆ ಹಣ ವರ್ಗಾವಣೆ, ನಕಲಿ ಠೇವಣಿ ಬಾಂಡ್ ಗಳ ಸೃಷ್ಟಿ ಬೆಳಕಿಗೆ ಬಂದಿದೆ. ಸೊಸೈಟಿಯ ಅಧ್ಯಕ್ಷ ರಾಜು ಎಂಬುವರು ನೀಡಿದ ದೂರಿನ ಮೇರಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಭಾರ ಸಿಇಒ ಆಶಾಲತಾ, ಆಕೆಯ ಪತಿ ಸೋಮಶೇಖರ್, ಬಿಡಿಸಿಸಿ, ಅಪೆಕ್ಸ್ ಬ್ಯಾಂಕ್ ಮ್ಯಾನೇಜರ್, ಆಡಿಟರ್ ಸೇರಿ 6 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Leave a Reply

Your email address will not be published. Required fields are marked *