ಕಾರ್ಕಳ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನೀತಿಯಿಂದಾಗಿ ರಾಜ್ಯ ದಿವಾಳಿಯತ್ತ ಸಾಗುತ್ತಿದೆ. ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಿಂದೀಚೆಗೆ ಅಭಿವೃದ್ಧಿ ಚಟುವಟಿಕೆ ಮರೀಚಿಕೆಯಾಗಿದೆ. ಪಡಿತರ ವಿತರಣೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿದ್ದರೂ, ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಸರಿಯಾಗಿ ಪಡಿತರ ಅಕ್ಕಿ ನೀಡದೆ ವಿಳಂಬ ಮಾಡುತ್ತಿದೆ. ಯಾವುದೋ ಸುಳ್ಳು ಕಾರಣ ನೀಡಿ ಬಡ ಜನರಿಗೆ ಕಾಂಗ್ರೆಸ್ ಸರ್ಕಾರ ವಂಚನೆ ಮಾಡುತ್ತಿದೆ. ಈ ತಿಂಗಳ ಅಕ್ಕಿ ಬಂದಿಲ್ಲ. ತಿಂಗಳ ಕೊನೆಯಲ್ಲಿ ದೀಪಾವಳಿ ಹಬ್ಬ ಬರಲಿದೆ. ಕನಿಷ್ಠ ಹಬ್ಬದ ಮೊದಲಾದರೂ ಪಡಿತರ ಅಕ್ಕಿಯನ್ನು ನೀಡಬೇಕು. ಒಂದು ವೇಳೆ ಹಬ್ಬದ ಒಳಗೆ ಅಕ್ಕಿ ನೀಡದಿದ್ದರೆ, ಗ್ರಾಮ ಪಂಚಾಯತ್ ಸದಸ್ಯರೆಲ್ಲರೂ ಒಟ್ಟಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಪಡಿತರ ಮಾತ್ರವಲ್ಲದೆ, ಸರ್ಕಾರದ ಇನ್ನಿತರ ಸವಲತ್ತುಗಳನ್ನೂ ಕೂಡ ಬಡ ಜನರಿಗೆ ನೀಡುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯನವರು, ಮಾತಿಗೊಮ್ಮೆನಾವು ಬಡವರ ಪರ, ಬಡವರ ಸರ್ಕಾರ ಎಂದು ಹೇಳುತ್ತಿದ್ದಾರೆ. ಬಡವರ ಹೆಸರು ಹೇಳಿಕೊಂಡು, ಅಧಿಕಾರ ಪಡೆದ ಸಿದ್ದರಾಮಯ್ಯ ಈಗ ಬಡವರನ್ನು ಸಂಪೂರ್ಣವಾಗಿ ಮರೆತು, ಪ್ರಸ್ತುತ ತನ್ನ ಕುರ್ಚಿ ಗಟ್ಟಿ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಸ್ಥಳೀಯವಾಗಿ ಸರ್ಕಾರದ ಸವಲತ್ತುಗಳನ್ನು ನಂಬಿಕೊAಡು ಬರುತ್ತಿರುವ ಬಡ ಜನರ ಪಾಡು ಕಷ್ಟದಾಯಕವಾಗಿದೆ. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ, ಸರ್ಕಾರವನ್ನು ಸ್ಥಳೀಯ ಸಂಸ್ಥೆ ಪ್ರತಿನಿಧಿಗಳಾದ ನಾವು ಎಚ್ಚರಿಸುತ್ತೇವೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.