ಕಾರ್ಕಳ: ಅತಿಯಾದ ಸೊಶೀಯಲ್ ಮೀಡಿಯಾ ಬಳಕೆ, ಶೋಕಿ ಜೀವನಕ್ಕೆ ಮಾರುಹೋಗಿ ಶ್ರೀಮಂತಿಕೆಯ ಜೀವನದ ಕನಸು ಕಾಣುತ್ತಿದ್ದ ಪ್ರತಿಮಾ ತನ್ನ ಬೇಡಿಕೆಗಳನ್ನು ಈಡೇರಿಸುವ ಪ್ರಿಯಕರ ಸಿಕ್ಕೇಬಿಟ್ಟ ಎಂದಾಗ ತನ್ನ ಜತೆ ಸಪ್ತಪದಿ ತುಳಿದ ಗಂಡನನ್ನೇ ಚಟ್ಟಕ್ಕೆ ಹತ್ತಿಸಿದಳು, ಇತ್ತ ತಂದೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮಕ್ಕಳು ತಮ್ಮ ತಾಯಿ ಮಾಡಿದ ಹೀನಕೃತ್ಯದಿಂದ ಅಕ್ಷರಶಃ ಅನಾಥರಾದರು. ಗಂಡ ಬೇಡ ತನಗೆ ಪ್ರಿಯಕರನೇ ಬೇಕೇಬೇಕು ಎಂದಿದ್ದರೆ ಗಂಡನ ಜೀವ ತೆಗೆಯುವ ಬದಲು ಆತನಿಗೆ ವಿಚ್ಚೇದನ ನೀಡಿ ಪ್ರಿಯಕರನ ಜತೆಗೆ ಹೋಗಬಹುದಿತ್ತು. ಆದರೆ ಗಂಡನನ್ನೇ ಬಲಿಪಡೆದು ಪ್ರಿಯಕರನ ಜತೆ ತಾನು ಸುಖವಾಗಿ ಬಾಳುತ್ತೇನೆ ಎನ್ನುವ ಆರೋಪಿ ಪ್ರತಿಮಾಳ ಕನಸಿಗೆ ತಾನೇ ಕೊಳ್ಳಿಯಿಟ್ಟುಕೊಂಡಿದ್ದಾಳೆ.
36 ವರ್ಷದ ಪ್ರತಿಮಾಳಿಗೆ ಫ್ಯಾಷನ್ ಹಾಗೂ ಶ್ರೀಮಂತಿಕೆಯ ಕನಸು, ಸದಾ ಜಾಲಿಯಾಗಿರಬೇಕೆನ್ನುವ ಬಯಕೆ ಆಕೆಯ ರೀಲ್ಸ್ ಗಳಿಂದಲೇ ವ್ಯಕ್ತವಾಗುತ್ತಿತ್ತು. ಇನ್ನು ಆಕೆಯ ಪ್ರಿಯಕರ 27ರ ಹರೆಯದ ದಿಲೀಪ್ ಹೆಗ್ಡೆ ಮದುವೆಯಾಗದ ಸುಂದರ ಯುವಕ,ತನ್ನ ತಂದೆಯ ಹೊಟೇಲ್ ಉದ್ಯಮ ನಡೆಸುವುದನ್ನು ಬಿಟ್ಟು ವಯೋಸಹಜ ಆಕರ್ಷಣೆಗೆ ಬಲಿಯಾಗಿ ಅವಳ ಮೋಹಪಾಶಕ್ಕೆ ಬಿದ್ದು ಏನು ಮಾಡಬಾರದಿತ್ತು ಅದೆಲ್ಲವನ್ನೂ ಮಾಡಿ ಇದೀಗ ಜೈಲಿನಲ್ಲಿ ಕಂಬಿ ಎಣಿಸುವ ದುಸ್ಥಿತಿ ಎದುರಾಗಿದೆ.ಇದಲ್ಲದೇ ಆರೋಪಿ ಪ್ರತಿಮಾಳ ಯೋಜನೆಯಂತೆ ಸ್ಲೋ ಪಾಯಿಸನ್ ರೋಸಿಯಂ ಪದಾರ್ಥವನ್ನು ಉಡುಪಿಯಿಂದ ಖರೀದಿಸಿದ್ದ ಕುರಿತು ಪೊಲೀಸರು ಜಾಡು ಹಿಡಿದು ತನಿಖೆ ನಡೆಸುತ್ತಿದ್ದು, ದಿಲೀಪ್ ಹೆಗ್ಡೆ ಯಾರಿಂದ ಖರೀದಿಸಿದ್ದ ಎಂದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಗಂಡನಿಗೆ ಸಂಸಾರದ ಹೊಣೆಗಾರಿಕೆಯ ಚಿಂತೆ, ಹೆಂಡತಿಗೆ ಶೋಕಿ ಜೀವನದ ಚಿಂತೆ!
ಪ್ರತಿಮಾಳ ಗಂಡ ಬಾಲಕೃಷ್ಣ ಪೂಜಾರಿ ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟು ದುಡಿಮೆ ಮಾಡಿ ಬ್ಯಾಂಕಿನಿAದ ಒಂದಷ್ಟು ಸಾಲ ಮಾಡಿ ಸ್ವಂತ ಮನೆ ಕಟ್ಟಿದ್ದರು.ವಿಪರ್ಯಾಸವೆಂದರೆ ಮನೆಯ ಗೃಹ ಪ್ರವೇಶವಾಗಿ ಇನ್ನೂ ಒಂದು ವರ್ಷ ಕಳೆಯುವುದರ ಮುನ್ನವೇ ಬಾಲಕೃಷ್ಣ ಪೂಜಾರಿ ಪತ್ನಿಯ ಮೋಸದಾಟಕ್ಕೆ ಬಲಿಯಾಗಬೇಕಾಯಿತು. ಬಾಲಕೃಷ್ಣ ಪೂಜಾರಿ ಮನೆಗೆ ಮಾಡಿದ್ದ ಸಾಲದ ಕಂತನ್ನು ಪಾವತಿಸುವುದರ ಜತೆಗೆ ಪತ್ನಿ ಹಾಗೂ ಮಕ್ಕಳಿಗೆ ಯಾವ ಕೊರತೆಯೂ ಇರದಂತೆ ನೋಡಿಕೊಳ್ಳುತ್ತಿದ್ದರೆ, ಇತ್ತ ಪತ್ನಿ ಪ್ರತಿಮಾ ಶೋಕಿ ಜೀವನಕ್ಕೆ ಬಲಿಬಿದ್ದಿದ್ದಳು, ಬ್ಯೂಟಿಶಿಯನ್ ಆಗಿ ಬ್ರೆöÊಡಲ್ ಮೇಕಪ್ ಗಾಗಿ ಊರೆಲ್ಲಾ ಸುತ್ತಾಡುತ್ತಿದ್ದ ಆಕೆ ವಿಪರೀತ ರೀಲ್ಸ್ ಮಾಡುವ ಚಟ ಹೊಂದಿದ್ದಳು. ಗಂಡನಿಗೆ ಒತ್ತಾಯಪೂರ್ವಕವಾಗಿ ರೀಲ್ಸ್ ಗೆ ಸೇರಿಸುತ್ತಿದ್ದಳು, ಕರಿಮಣಿ ಮಾಲೀಕ ನೀನಲ್ಲ ಎನ್ನುವ ರೀಲ್ಸ್ ಗೆ ಗಂಡನನ್ನು ಸೇರಿಸಿ ಬಳಿಕ ಆತನನ್ನೇ ಮುಗಿಸಿ ಈ ಹಾಡಿಗೂ ಅನ್ವರ್ಥಕವಾಗಿಬಿಟ್ಟಳು.
ದಾಂಪತ್ಯ ಜೀವನದಲ್ಲಿ ಎಲ್ಲಾ ಸಂತೋಷ,ಖುಷಿಯನ್ನು ಪಡೆದುಕೊಂಡಿದ್ದ ವಿಷಕನ್ಯೆ ಪ್ರತಿಮಾ ಜೀವಕ್ಕಿಂತ ಹೆಚ್ಚು ಪ್ರೀತಿಸುವ ಗಂಡ ಹಾಗೂ ಮುತ್ತಿನಂತಹ ಇಬ್ಬರು ಮಕ್ಕಳ ಜತೆ ನೆಮ್ಮದಿಯ ಜೀವನ ನಡೆಸುವುದನ್ನು ಬಿಟ್ಟು ಶೋಕಿ ಜೀವನ ಹಣದಾಸೆಗೆ ಬಲಿಬಿದ್ದು ತನ್ನ ಜೀವನವನ್ನೇ ಹಾಳು ಮಾಡಿಕೊಂಡಿದ್ದು ನಿಜಕ್ಕೂ ದುರಂತವೇ ಸರಿ.