ಉಡುಪಿ:ಉಡುಪಿ ಜ್ಞಾನಸುಧಾದಲ್ಲಿ ನೂತನವಾಗಿ ನಿರ್ಮಾಣವಾದ “ಕೃಷ್ಣಾಪುರ ಸಭಾಂಗಣ” ಮತ್ತು ಗ್ರಂಥಾಲಯದ ಉದ್ಘಾಟನೆಯನ್ನು ಪರಮ ಪೂಜ್ಯ ಶ್ರೀ ವಿದ್ಯಾಸಾಗರ
ತೀರ್ಥ ಸ್ವಾಮೀಜಿ ಕೃಷ್ಣಾಪುರ ಮಠ ಇವರು ನೆರವೇರಿಸಿ, ಆಶೀರ್ವಚನ ನೀಡಿದರು.
ಭಗವದ್ಗೀತೆಯು ನಮ್ಮ ಆಂತರಿಕ ಶುದ್ಧತೆಗೆ ಕಾರಣವಾಗುವುದು. ಮನೋನಿಗ್ರಹದಿಂದ ಎಲ್ಲಾ ಸಾಧನೆ ಸಾಧ್ಯ. ಈ ಸಂಸ್ಥೆಗಳ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಉತ್ತಮ
ಸಂಕಲ್ಪದಿAದ ಆರಂಭಿಸಿದ ಈ ಶೈಕ್ಷಣಿಕ ಮತ್ತು ಧಾರ್ಮಿಕ ಕೈಂಕರ್ಯ ಶ್ಲಾಘನೀಯ ಎಂದರು.
ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಪ್ರಾಸ್ತಾವಿಕ ಮಾತನಾಡಿ ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜು ನಾಗಬನ ಕ್ಯಾಂಪಸ್ನಲ್ಲಿ ಸ್ಥಾಪನೆಯಾಗಲು ಸ್ಥಳವನ್ನು ನೀಡಿದ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರಿಗೆ ಕೃತಜ್ಞತೆಯನ್ನು ಅರ್ಪಿಸಿದರು. ಆ ಸವಿನೆನಪಿಗಾಗಿ ಕೃಷ್ಣಾಪುರ ಸಭಾಂಗಣ ನಿರ್ಮಾಣವಾಗಿ ಸ್ವಾಮೀಜಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ಅವರ ಆಶೀರ್ವಾದ ವಿದ್ಯಾರ್ಥಿಗಳಿಗೆ ಶ್ರೀರಕ್ಷೆಯಾಗಿ ನಮ್ಮೆಲ್ಲರಿಗೆ ಅವರ ಜೀವನ ಮೌಲ್ಯಗಳು ಆದರ್ಶವಾಗಲಿ ಎಂದರು.
ಈ ಕಾರ್ಯಕ್ರಮದಲ್ಲಿ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಟ್ರಸ್ಟಿಗಳಾದ ಶ್ರೀಮತಿ ವಿದ್ಯಾವತಿ ಸುಧಾಕರ ಶೆಟ್ಟಿ, ಅನಿಲ್ ಕುಮಾರ್ ಜೈನ್, ಸಿ.ಎ.ನಿತ್ಯಾನಂದ ಪ್ರಭು,
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ದಿನೇಶ್ ಎಂ ಕೊಡವೂರು, ಉಡುಪಿ ಜ್ಞಾನಸುಧಾ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ
ಸAತೋ಼ಷ್, ಮಣಿಪಾಲ ಜ್ಞಾನಸುಧಾ ಪ.ಪೂ ಕಾಲೇಜಿನಪ್ರಾಂಶುಪಾಲರಾದ ಗಣೇಶ್, ಉಪಪ್ರಾಂಶುಪಾಲರಾದ ಪ್ರಕಾಶ್ ಜೋಗಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್
ಡಾ.ಮಿಥುನ್ ಯು ಮುಂತಾದವರು ಉಪಸ್ಥಿತರಿದ್ದರು.
ಮಣಿಪಾಲ ಜ್ಞಾನಸುಧಾದ ಆಂಗ್ಲ ಭಾಷಾ ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿದರು.