ಕಾರ್ಕಳ : ಕಲ್ಯಾ ಗ್ರಾಮದ ಗುಳಿಗ ದೈವದ ಗುಡಿಯ ಬಳಿ ಪುಟ್ಟ ಚಿರತೆ ಮರಿಯೊಂದು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಮರಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ತಾಯಿಯಿಂದ ಬೇರ್ಪಟ್ಟು ಅಸಹಾಯಕವಾಗಿದ್ದ ಆ ಪುಟ್ಟ ಮರಿಯನ್ನು ಸ್ಥಳೀಯರು ಗಮನಿದ್ದು ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಗ್ರಾಮಸ್ಥರ ನೆರವಿನೊಂದಿಗೆ ಮರಿಯನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ. ಕಲ್ಯಾ ಗ್ರಾಮದ ಪಡುಮನೆ ಲಕ್ಷ್ಮಣ ಶೆಟ್ಟಿ ಎಂಬವರ ಜಾಗದಲ್ಲಿ ಮರಿ ಕಂಡುಬAದಿದ್ದು. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಘುಪತಿ ಪೂಜಾರಿ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ.
































































































