Share this news

ಕಾರ್ಕಳ: ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ನಡ್ವಾಲು ಎಂಬಲ್ಲಿ ಕುದುರೆಮುಖ ರಾಷ್ಟಿçÃಯ ಉದ್ಯಾನವನದ ಮೀಸಲು ಅಭಯಾರಣ್ಯದಲ್ಲಿ ನಾಡಕೋವಿಯಿಂದ ಕಾಡುಪ್ರಾಣಿಗಳನ್ನು ಬೇಟೆಯಾಡಲು ಹೋಗಿದ್ದ ಮೂವರು ಆರೋಪಿಗಳನ್ನು ಅಂಡಾರು ವನ್ಯಜೀವಿ ಘಟಕ ಉಪ ವಲಯ ಅರಣ್ಯಾಧಿಕಾರಿ ಅಭಿಲಾಷ್ ಎಸ್.ಬಿ ನೇತೃತ್ವದ ಅರಣ್ಯ ಅಧಿಕಾರಿಗಳ ತಂಡ ಬಂಧಿಸಿದೆ. ಈ ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೀಸಲು ಅರಣ್ಯ ವ್ಯಾಪ್ತಿಯ ಕೆರ್ವಾಶೆ ಗ್ರಾಮದ ನಡ್ವಾಲು ಎಂಬಲ್ಲಿ ಅ.31 ರಂದು ರಾತ್ರಿ ಅಂಡಾರು ವನ್ಯಜೀವಿ ಘಟಕದ ಉಪವಲಯ ಅರಣ್ಯಾಧಿಕಾರಿ ಅಭಿಲಾಷ್ ಎಸ್.ಬಿ ತಮ್ಮ ಸಿಬ್ಬಂದಿಯವರೊAದಿಗೆ ರಾತ್ರಿ ಗಸ್ತು ತಿರುಗುತ್ತಿದ್ದಾಗ ಆರೋಪಿಗಳಾದ ವಸಂತ, ಜಯ, ರಾಕೇಶ್ ಹಾಗೂ ಸಂತೋಷ್ ಎಂಬವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಲು ಅಕ್ರಮ ನಾಡಕೋವಿಯೊಂದಿಗೆ ಸಂಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಮೂವರು ಆರೋಪಿಗಳಾದ ವಸಂತ, ಜಯ ಮತ್ತು ರಾಕೇಶ್ ಎಂಬವರನ್ನು ಬಂಧಿಸಿದ್ದು ಮತೋರ್ವ ಆರೋಪಿ ಸಂತೋಷ್ ಪರಾರಿಯಾಗಿದ್ದಾನೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ಜೈಲಿಗಟ್ಟಿ ಅವರಿಂದ ಅಕ್ರಮ ನಾಡಕೋವಿಯನ್ನು ವಶಪಡಿಸಿಕೊಳ್ಳಲಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *