ಹೆಬ್ರಿ: ವಿಪರೀತ ಮದ್ಯಪಾನದ ಚಟ ಹೊಂದಿದ್ದ ವ್ಯಕ್ತಿಯೊಬ್ಬರು ಸೆಲ್ಫ್ ನಲ್ಲಿದ್ದ ಮದ್ಯದ ಬಾಟಲು ತೆಗೆಯುವ ವೇಳೆ ಬಿದ್ದು ಗಾಯಗೊಂಡಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಶಿವಪುರದ ಸತೀಶ್(37) ಮೃತಪಟ್ಟವರು.
ಸತೀಶ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ವಿಪರೀತ ಮದ್ಯಪಾನದ ಚಟ ಹೊಂದಿದ್ದರು. ಅವರಿಗೆ ವೈದ್ಯರು ಅರೋಗ್ಯದ ಹಿತದೃಷ್ಟಿಯಿಂದ ಮದ್ಯಪಾನ ಮಾಡಬಾರದಾಗಿ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಆದರೂ ಸತೀಶ್ ಮದ್ಯಪಾನ ಚಟ ಬಿಟ್ಟಿರಲಿಲ್ಲ.
ತಿಂಗಳ ಹಿಂದೆ ಬೆಂಗಳೂರಿನಿAದ ವಾಪಾಸಾಗಿದ್ದ ಸತೀಶ್ ನ.8 ರಂದು ನಾಲ್ಕೂರು ಗ್ರಾಮದ ಕಜ್ಕೆಯಲ್ಲಿರುವ ಅವರ ತಂಗಿಯ ಮನೆಯ ಸೆಲ್ಪಿನಲ್ಲಿರಿಸಿದ್ದ ಮದ್ಯದ ಬಾಟಲನ್ನು ತೆಗೆಯಲು ಹೋಗಿ ನೆಲಕ್ಕೆ ಬಿದ್ದು ಕಣ್ಣಿನ ಬಳಿ ಗಾಯವಾಗಿತ್ತು. ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ನ.12 ರಂದು ಮೃಥಪಟ್ಟಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.