ಬೆಂಗಳೂರು: ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿರುವ ಮುಡಾ ಹಗರಣ ಪ್ರಕರಣದ ಸಂಬAಧ ರಾಯಚೂರು ಸಂಸದ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕುಮಾರ್ ನಾಯಕ್ ಮತ್ತು ಸಿದ್ದರಾಮಯ್ಯ ಅವರ ಖಾಸಗಿ ಆಪ್ತ ಸಹಾಯಕ ಎನ್ನಲಾದ ಎಸ್‌ಜಿ ದಿನೇಶ್ ಕುಮಾರ್ ಅವರನ್ನು ಬುಧವಾರ ಜಾರಿ ನಿರ್ದೇಶನಾಲಯ (ಇ.ಡಿ.) ತೀವ್ರ ವಿಚಾರಣೆ ನಡೆಸಿದೆ.
ರಾಯಚೂರು ಕಾಂಗ್ರೆಸ್ ಸಂಸದರಾಗಿರುವ ಕುಮಾರ್ ನಾಯಕ್ ಮುಡಾ ಹಗರಣ ನಡೆದ ಸಂದರ್ಭ ಮೈಸೂರು ಡಿಸಿಯಾಗಿದ್ದರು. ಇನ್ನು ಸಿದ್ದರಾಮಯ್ಯ ಆಪ್ತ ಸಹಾಯಕ ಸಿಟಿ ಕುಮಾರ್ ಅಲಿಯಾಸ್ ಎಸ್.ಜಿ. ದಿನೇಶ್ ಕುಮಾರ್ 2022ರಲ್ಲಿ ಖಾತೆಗಾಗಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಿನಲ್ಲಿ ಹಾಕಲಾಗಿದ್ದ ಅರ್ಜಿಗೆ ಸಹಿ ಹಾಕಿರುವ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇಬ್ಬರಿಗೂ ಇ.ಡಿ. ಸಮನ್ಸ್ ಜಾರಿ ಮಾಡಿತ್ತು. ಇದರ ಬೆನ್ನಲ್ಲೇ ಬುಧವಾರ ಇ.ಡಿ. ಕಚೇರಿಗೆ ಇಬ್ಬರೂ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ಕುಮಾರ್ ನಾಯಕ್ ಅವರನ್ನು ಸುಮಾರು ಆರೂವರೆ ತಾಸುಗಳ ಕಾಲ ವಿಚಾರಣೆ ನಡೆಸಿದ್ದ ಇ.ಡಿ. ಅಧಿಕಾರಿಗಳು ಅಂದು ಅವರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಮುಡಾ ನಿವೇಶನದ ಸಂಬAಧ ನಡೆದಿದ್ದ ಬೆಳವಣಿಗೆಗಳ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಕುಮಾರ್ ನಾಯಕ್ ಮೈಸೂರಿನಲ್ಲಿ 2002ರಿಂದ 2005ರ ವರೆಗೆ 3 ವರ್ಷಗಳ ಕಾಲ ಜಿಲ್ಲಾಧಿಕಾರಿಯಾಗಿದ್ದರು.