ಬೆಂಗಳೂರು : ಪಶ್ಚಿಮಘಟ್ಟ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸಲು ನೀರಿನ ಬಿಲ್ ಮೇಲೆ 2ರಿಂದ 3 ರೂಪಾಯಿ ಹಸಿರು ಸೆಸ್ ವಿಧಿಸುವ ಪ್ರಸ್ತಾ ವನೆ ಸಿದ್ಧಪಡಿಸಲಾಗುತ್ತಿದ್ದು, ಈ ಕ್ರಮದಿಂದ ಜನರಿಗೆ ಯಾವುದೇ ಹೊರೆಯಾಗುವುದಿಲ್ಲ. ಒಂದು ವೇಳೆ ಜನರಿಂದ ಆಕ್ಷೇಪ ವ್ಯಕ್ತವಾದರೆ ಪ್ರಸ್ತಾವನೆ ಕೈಬಿಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಉಗಮವಾಗುವ ನದಿಗಳ ನೀರು ಪೂರೈಕೆಯಾಗುವ ನಗರಗಳ ನಿವಾಸಿ ಗಳು ಬಳಸುವ ನೀರಿಗೆ ಪ್ರತಿ ತಿಂಗಳು 2ರಿಂದ 3 ರು. ಸೆಸ್ ಹಾಕಲಾಗುತ್ತದೆ. ಅದರಿಂದ ಒಂದು ಕುಟುಂಬಕ್ಕೆ ದಿನವೊಂದಕ್ಕೆ ಸರಾಸರಿ ಕೇವಲ 10 ಪೈಸೆ ಬೀಳಲಿದೆ. ಇದರಿಂದ ಯಾರಿಗೂ ಹೊರೆಯಾಗುವುದಿಲ್ಲ ಎಂದರು.
ಸುಸ್ಥಿರ ಶುದ್ಧ ಕುಡಿಯುವ ನೀರಿಗಾಗಿ ಪಶ್ಚಿಮಘಟ್ಟ ಸಂರಕ್ಷಣೆ ಅಗತ್ಯ ವಾಗಿದೆ. ಸೆಸ್ ಕುರಿತಂತೆ ಸಾರ್ವಜನಿಕರಿಗೆ ತಿಳಿದಾಗ ಪಶ್ಚಿಮಘಟ್ಟ ಮತ್ತು ನೀರು ಉಳಿ ತಾಯದ ಬಗ್ಗೆಯೂ ಜಾಗೃತಿ ಮೂಡುತ್ತದೆ ಎಂದು ಹೇಳಿದರು.