ನವದೆಹಲಿ : ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಪ್ರಜ್ಞೆ (ಇಸ್ಕಾನ್) ನಿಷೇಧಿಸುವಂತೆ ಒತ್ತಾಯಿಸಿ ಇಸ್ಲಾಮಿಕ್ ಗುಂಪುಗಳು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಗೆ ಅಂತಿಮ ಗಡುವು ನೀಡಿದೆ. ತಮ್ಮ ಬೇಡಿಕೆಗಳನ್ನ ಈಡೇರಿಸದಿದ್ದರೆ ತಾವೇ ನೋಡಿಕೊಳ್ಳುವುದಾಗಿ ಈ ಗುಂಪು ಪ್ರತಿಜ್ಞೆ ಮಾಡಿದೆ ಮತ್ತು ದೇಶಾದ್ಯಂತ ಇಸ್ಕಾನ್ ಭಕ್ತರನ್ನು ಅಪಹರಿಸಿ ಕ್ರೂರವಾಗಿ ಕೊಲ್ಲುವುದಾಗಿ ಬೆದರಿಕೆ ಹಾಕಿದೆ.
ಇದಕ್ಕೂ ಮುನ್ನ ಶುಕ್ರವಾರ, ಚಿತ್ತಗಾಂಗ್ ಮೂಲದ ಇಸ್ಲಾಮಿಕ್ ಸಂಘಟನೆ ಹೆಫಾಜತ್-ಇ-ಇಸ್ಲಾಂ ರ‍್ಯಾಲಿಯಲ್ಲಿ ಒಂದು ಇಸ್ಕಾನ್ ಹಿಡಿಯಿರಿ, ನಂತರ ಹತ್ಯೆ ಮಾಡಿ ಎಂಬ ಹಿಂಸಾತ್ಮಕ ಘೋಷಣೆಗಳನ್ನು ಕೂಗಿದೆ.
ಹಿಂದೂ ಅಲ್ಪಸಂಖ್ಯಾತರ ನೆಲೆಯಾಗಿರುವ ಬಾಂಗ್ಲಾದೇಶದಲ್ಲಿ ಹಿಂದೂ ಸಂಪ್ರದಾಯಗಳನ್ನು ಆಧರಿಸಿದ ಆಧ್ಯಾತ್ಮಿಕ ಆಚರಣೆಗಳನ್ನ ಉತ್ತೇಜಿಸಲು ಜಾಗತಿಕವಾಗಿ ಹೆಸರುವಾಸಿಯಾದ ಇಸ್ಕಾನ್ ಸಕ್ರಿಯ ಸಂಘಟನೆಯಾಗಿದೆ.ಇಸ್ಕಾನ್ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ ಮತ್ತು ಹಿಂದೂಗಳಿಗೆ ಅಲ್ಲಿ ಪೂಜಿಸುವ ಹಕ್ಕಿದೆ, ಅಥವಾ ಅವರು ಹಿಂದೂಗಳ ಮೂಲಭೂತ ಹಕ್ಕನ್ನ ತೆಗೆದುಹಾಕಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.