ಕಾರ್ಕಳ: ತರುಣ ಭಾರತ ಚಾರಿಟೇಬಲ್ ಟ್ರಸ್ಟ್ (ರಿ.) ಗ್ರಾಮ ಪಂಚಾಯತ್ ಮರ್ಣೆ ಹಾಗೂ ವಿವಿಧ ಸಂಘಸAಸ್ಥೆಗಳ ಸಹಕಾರದೊಂದಿಗೆ ಸ್ವಚ್ಛತಾಭಿಯಾನ ಮಾಸಾಚರಣೆ – 2024ರ “ಸ್ವಚ್ಛ ಸಂಭ್ರಮ ಮತ್ತು ಬೆಸುಗೆ ಆವೃತ್ತಿ – 2” ಪುಸ್ತಕ ಬಿಡುಗಡೆ ಸಮಾರಂಭವು ನ.17 ರಂದು ಭಾನುವಾರ ನಡೆಯಿತು.
ನಮ್ಮ ತಂಡದ ಮೂಲ ಆಶಯ ವ್ಯಕ್ತಿತ್ವ ವಿಕಸನ ಮತ್ತು ನೈತಿಕ ಮೌಲ್ಯವರ್ಧನೆ ಸರಣಿ ಕಾರ್ಯಕ್ರಮದ ಅಂಗವಾಗಿ ಮಂಗಳೂರು ಶ್ರೀ ರಾಮಕೃಷ್ಣ ಮಠ ಮತ್ತು ಮಿಷನ್ ಇದರ ಅಧ್ಯಕ್ಷರಾದ ಜಿತಕಾಮಾನಂದ ಸ್ವಾಮೀಜಿಯವರು ವ್ಯಕ್ತಿತ್ವ ನಿರ್ಮಾಣ ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಎಂಬ ಕುರಿತು ಪ್ರವಚನ ಮಾಲಿಕೆಯನ್ನು ಸಂಯೋಜನೆ ಮಾಡಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಘವೇಂದ್ರ ಭಟ್ ವಹಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರಭಾವತಿ ನಾಯಕ್, ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಆನಂದ ಹೆಗ್ಡೆ, ಕಾರ್ಕಳ ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಅನಿಲ್ ಕುಮಾರ್ ನಿಟ್ಟೆ, ಶ್ರೀ ಹರಿಪ್ರಸಾದ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸುಸಂದರ್ಭದಲ್ಲಿ ಥೈಲ್ಯಾಂಡ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಪಡೆದಿರುವ ಕುಟಟ ಅನನ್ಯ, ಯೋಗಸನದಲ್ಲಿ ವಿಶ್ವ ಮಟ್ಟದ ದಾಖಲೆ ನಿರ್ಮಿಸಿರುವ ಪ್ರತ್ಯಕ್ಷ ಕುಮಾರ್ ಹೆಗ್ಡೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನೀಡುವ ಜಾಗೃತಿಮಿತ್ರ ಪುರಸ್ಕಾರಕ್ಕೆ ಭಾಜನರಾದ ಗಣಪತಿ ಆಚಾರ್ಯ ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.
ವಿಘ್ನೇಶ್ ಪೂಜಾರಿ ಸ್ವಾಗತಿಸಿ, ಸತೀಶ ಹೆಗ್ಡೆ ವಂದಿಸಿದರು. ಶ್ರೀಪಾದ ಹೆಗ್ಡೆ ಪ್ರಸ್ತಾವನೆಗೈದು ಶ್ರೀಕಾಂತ್ ಭಟ್ ಕಾರ್ಯಕ್ರಮ ನಿರೂಪಿಸಿದರು.