ಮೂಡುಬಿದಿರೆ:ಜಾಗೃತ ಮರಾಠಿ ಸಮಾಜದ ವತಿಯಿಂದ ಮೂಡುಬಿದ್ರೆಯ ಕೆಸರುಗದ್ದೆ ಸುನಂದ ಮಾಧವ ಪ್ರಭು ಕಲ್ಯಾಣ ಮಂಟಪದಲ್ಲಿ ಮರಾಠಿ ಬಾಂಧವರ ಚಿಂತನ ಮಂಥನ ಸಭೆ ನ.17ರಂದು ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮೂಡುಬಿದ್ರೆ ಕಳಸ ಬೈಲು ಮಹಮ್ಮಾಯಿ ದೇವಸ್ಥಾನದ ಅರ್ಚಕರಾದ ಕಳಸಬೈಲು ಕೂಡುಕಟ್ಟಿನ ಗುರಿಕಾರರಾದ ಅಪ್ಪು ನಾಯ್ಕ್ ಉದ್ಘಾಟಿಸಿದರು.
ಹೆಬ್ರಿ ಮರಾಠಿ ಸಂಘದ ಅಧ್ಯಕ್ಷ ನಾಗೇಂದ್ರ ನಾಯ್ಕರು ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಸಮುದಾಯ ಕೆಲವೊಂದು ವಿಷಯಗಳ ಬಗ್ಗೆ ಇನ್ನೂ ಗೊಂದಲದಲ್ಲಿದೆ ಅದರಲ್ಲಿ ಶೃಂಗೇರಿ ಗುರುಪೀಠ, ಶಿವಾಜಿ ಮಹಾರಾಜರು ಅದೇ ರೀತಿ ನಮ್ಮ ಸಮುದಾಯಕ್ಕೆ ಸಿಕ್ಕಿರುವ ಮೀಸಲಾತಿಯ ಬಗ್ಗೆ ಸವಿವರವಾಗಿ ಮಾಹಿತಿಯನ್ನು ನೀಡಿದರು.
ಉಮೇಶ್ ಸೂಡ ಮರಾಠಿ ಸಮುದಾಯ ಜಾಗೃತ ರಾಗಬೇಕು ಹಾಗೂ ಯಾರೇ ತಪ್ಪು ಮಾಡಿದರೂ ಅದನ್ನು ಪ್ರಶ್ನಿಸುವಂತಹ ಹಾಗೂ ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಯಾವುದೇ ರೀತಿಯ ಹೊಂದಾಣಿಕೆಯಿಲ್ಲದೇ ಜಾಗೃತರಾಗಬೇಕು ಎಂದರು.
ಈ ಸಂದರ್ಭದಲ್ಲಿ ಸಂಜೀವ ನಾಯ್ಕ್ ಹೆಬ್ರಿ, ಉಮೇಶ್ ನಾಯ್ಕ್ ಚೆರ್ಕಾಡಿ, ಭೋಜ ನಾಯ್ಕ್ ಬೈಂದೂರು, ಅಶೋಕ್ ನಾಯ್ಕ್ ಕಲ್ಲ ಮುಂಡ್ಕೂರು, ಶಂಕರ್ ನಾಯ್ಕ ದುರ್ಗ, ವಿನಲತಾ ಮಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುಷ್ಪರಾಜ್ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿ ವಂದಿಸಿದರು.