ಕಾರ್ಕಳ : ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಚಿಕ್ಕಲ್ ಬೆಟ್ಟು ಕ್ರಾಸ್ ಬಳಿಯ ಹರಿಯಪ್ಪನಕೆರೆಯ ಅಪಾಯಕಾರಿ ದುಗ್ಗಂಟ್ರಾಯ ತಿರುವಿನಲ್ಲಿ ಪಿಕಪ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇಂದು ಸಂಜೆ (ಗುರುವಾರ) ಸುಮಾರು 6.30ರ ವೇಳೆಗೆ ಈ ಅಪಘಾತ ಸಂಭವಿಸಿದ್ದು ನೆಲ್ಲಿಕಟ್ಟೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಬೈಕ್ ಸವಾರ ಹರಿಯಪ್ಪನಕೆರೆಯ ಅಪಾಯಕಾರಿ ದುಗ್ಗಂಟ್ರಾಯ ತಿರುವಿನಲ್ಲಿ ಓವರ್ ಟೇಕ್ ಮಾಡಲು ಹೋಗಿ ಎದುರಿನಿಂದ ಬರುತ್ತಿದ್ದ ಪಿಕಪ್ ಗೆ ಡಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟು ದಾರುಣವಾಗಿ ಮೃತಪಟ್ಟಿದ್ದಾರೆ.
ಅಪಘಾತದ ತೀವೃತೆಗೆ ಬೈಕ್ ಸವಾರನ ಮೃತದೇಹ ಛಿದ್ರವಾಗಿದ್ದು, ನೆಲ್ಲಿಕಟ್ಟೆಯ ಲಾರೆನ್ಸ್ ಅಲ್ಮೇಡ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಕಾರ್ಕಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.