ಹೆಬ್ರಿ: ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಭಜನಾ ಮಂಗಲೋತ್ಸವ ನೆರವೇರಿತು.
ಮುಂಜಾನೆ 8 ಘಂಟೆಗೆ ಪ್ರಧಾನ ಅರ್ಚಕರಾದ ವಾಮನ್ ಭಟ್ ಇವರು ದೀಪ ಪ್ರಜ್ವಲನೆ ಮಾಡಿ ಆಹೋ ರಾತ್ರಿ ಭಜನೆಗೆ ಚಾಲನೆ ನೀಡಿದರು.
ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 25 ಜಿ. ಎಸ್. ಬಿ. ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ನಡೆದಿದ್ದು ಮರುದಿವಸ ಮುಂಜಾನೆ ಮಂಗಲದ ಬಳಿಕ ಶ್ರೀ ದೇವರ ಅವಭ್ರತ ಉತ್ಸವ ಹಾಗೂ ಮುಕ್ಕೋಟಿ ದುವಾದಶಿಯ ವಸಂತ ಪೂಜೆ ಹಾಗೂ ಸಮಾರಾಧನೆ ಮತ್ತು ರಾತ್ರಿ ಬೆಳ್ಳಿ ಮಂಟಪದಲ್ಲಿ ಶ್ರೀ ಗೋಪಾಲಕೃಷ್ಣ ದೇವರ ಉತ್ಸವ ನೆರವೇರಿತು, ಈ ದಿನದ ಸಂಪೂರ್ಣ ಸೇವೆ ಹರಿಖಂಡಿಗೆ ದೇವಸ್ಥಾನದ ಮೊಕ್ತೇಸರರಾದ ಮುನಿಯಾಲು ದಿನೇಶ್ ಪೈ ಮತ್ತು ಮಕ್ಕಳಿಂದ ನೆರವೇರಿತು.