ಉಡುಪಿ: ಪೇಜಾವರ ಮಠದ ಶ್ರೀಗಳಾದ ವಿಶ್ವಪ್ರಸನ್ನ ಶ್ರೀಗಳ ಅವಹೇಳಕಾರಿಯಾಗಿ ಏಕವಚನದಲ್ಲಿ ನಿಂದಿಸಿ ಜೀವ ಬೆದರಿಕೆಯೊಡ್ಡಿರುವ ಆರೋಪದಲ್ಲಿ ವಿಜಯಪುರದ ಭಿಮ್ ಆರ್ಮಿ ಸಂಘಟನೆಯ ಮತೀನ್ ಕುಮಾರ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಉಡುಪಿ ಹಿಂದೂ ಜಾಗರಣ ವೇದಿಕೆ ದೂರು ನೀಡಿದೆ.
ಮತೀನ್ ಕುಮಾರ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಪೇಜಾವರ ಸ್ವಾಮಿಗಳ ವಿರುದ್ಧ ಹಿಗ್ಗಾಮುಗ್ಗಾ ಏಕವಚನದಲ್ಲಿ ನಿಂದಿಸಿ, ಗಾಂಡು, ನಾಮಾರ್ಧ ಎಂದು ನಿಂದಿಸಿ ಸುಮ್ಮನಿದ್ದರೆ ಸರಿ ಇಲ್ಲವಾದರೆ ಭೀಮಾ ಗೋರೆಗಾಂವ್ ಯುದ್ದದ ಮಾದರಿಯಲ್ಲಿ ಉಡುಪಿಯಲ್ಲಿ ಯುದ್ದ ನಡೆಯಲಿದೆ,ನಿನ್ನ ಜತೆ ಹಿಂದೂಗಳನ್ನು ಕರೆದುಕೊಂಡು ಬಾ ನಾವು ದಲಿತರ ತಾಕತ್ತು ತೋರಿಸುತ್ತೇವೆ ಎನ್ನುವ ಜೀವ ಬೆದರಿಕೆ ಹಾಕಿ, ಹಿಂದೂ ಸಮುದಾಯದಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸಿದ್ದಾನೆ ಎಂದು ಜಾಗರಣ ವೇದಿಕೆ ಆರೋಪಿಸಿದ್ದು, ಈ ಕುರಿತು ಕಾರ್ಕಳದ ಮುಡಾರು ಗ್ರಾಮದ ಹರೀಶ್ ಮೇರ ಎಂಬವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಉಮೇಶ್ ಸೂಡ, ಮಹೇಶ್ ಬೈಲೂರು, ಶ್ರೀಕಾಂತ್ ಶೆಟ್ಟಿ, ಗುರುಪ್ರಸಾದ್, ನಿಖಿಲ್ ಮಂಚಿ ಮುಂತಾದವರು ಉಪಸ್ಥಿತರಿದ್ದರು.