ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇಕಡಾ 15ರಷ್ಟು ಏರಿಕೆಗೆ ಅನುಮೋದನೆ ನೀಡಲಾಗಿದೆ.
ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಆಗಸ್ಟ್ ನಲ್ಲಿ ನಾಲ್ಕು ಸಾರಿಗೆ ನಿಗಮಗಳು ಪ್ರಸ್ತಾವನೆ ಸಲ್ಲಿಸಿದ್ದವು. ಅದರ ಬೆನ್ನಲ್ಲೇ ಇಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ..ಸಚಿವ ಸಂಪುಟ ಸಭೆ ಬಳಿಕ ಸರ್ಕಾರ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.ಈ ಕುರಿತು ಅಧಿಕೃತ ಆದೇಶ ಬಂದಲ್ಲಿ, ಯಾವಾಗಿನಿಂದ ಈ ಹೊಸ ದರ ಜಾರಿ ಆಗಲಿದೆ, ಸಲಹೆ, ಸೂಚನೆಗಳು ತಿಳಿಯಲಿವೆ.
ಸಚಿವ ಸಂಪುಟ ಟಿಕೆಟ್ ದರ ಏರಿಕೆ ಮಾಡುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಬಸ್ ದರ ಹೆಚ್ಚಳ ಎನ್ನುತ್ತೀರಾ, ಆದರೆ ಬಸ್ ಇಲ್ಲದೆ ನಿಂತು ಸಾಕಾಗಿದೆ . ಯಾವುದೇ ಕಾರಣಕ್ಕೂ ದರ ಹೆಚ್ಚಳ ಮಾಡಬಾರದು. ಮಹಿಳೆಯರಿಗೆ ಉಚಿತ ಅಂದ್ರೆ, ನಮಗೂ ಉಚಿತ ಮಾಡಿ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯನಾ ಮಾಡುವುದಿದ್ದರೆ ಎಲ್ಲರಿಗೂ ಒಂದೇ ಮಾಡಿ ಎಂದು ಹೇಳಿದ್ದಾರೆ.