Share this news

ಕಾರ್ಕಳ: ಯಕ್ಷಗಾನ ಎಂದರೆ ಒಂದು ಧಾರ್ಮಿಕ ಪರಂಪರೆಯನ್ನು ಹೊಂದಿರುವ ಧಾರ್ಮಿಕ ನೆಲೆಕಟ್ಟಿನ ಮೇಲೆ ನಡೆದು ಬಂದಿರುವ ಗಂಡುಕಲೆ. ಇದು ಅನಾದಿಕಾಲದಿಂದಲೂ ಯಾವುದೇ ಆತಂಕ-ಅಡ್ಡಿಗಳಿಲ್ಲದೇ ಯಾವುದೇ ಜಾತಿ-ಮತ ಧರ್ಮ, ಪಕ್ಷಗಳನ್ನು ಮೀರಿದ ಕಲೆಯಾಗಿದ್ದು, ಕರಾವಳಿ ಕರ್ನಾಟಕದ ವಿಶಿಷ್ಟ ಕಲಾ ಪ್ರಕಾರವಾಗಿದೆ. ಇಂತಹ ಇತಿಹಾಸವನ್ನು ಹೊಂದಿರುವ ಯಕ್ಷಗಾನ ಪ್ರದರ್ಶನ ಆಯೋಜನೆ ಮಾಡಿರುವ ಆಯೋಜಕರ ಮೇಲೆ ಕೇಸ್ ದಾಖಲು ಮಾಡಿರುವುದನ್ನು ಕಾರ್ಕಳ ಯಕ್ಷ ಕಲಾ ರಂಗ ಕಟುವಾಗಿ ಖಂಡಿಸಿದೆ.

 

ಕಾರ್ಕಳದ ಮುಂಡ್ಲಿಯಲ್ಲಿ ಪ್ರದರ್ಶನವಾಗುತ್ತಿದ್ದ ಯಕ್ಷಗಾನದ ಪ್ರದರ್ಶನಕ್ಕೆ ತಡೆಯೊಡ್ಡಿದ ಪೊಲೀಸರು ಆಯೋಜಕರ ಮೇಲೆ ಪ್ರಕರಣ ದಾಖಲಿಸಿದ್ದು ಸರಿಯಲ್ಲ. ಹಾಗೂ ಇಡೀ ಊರಿನ ಗ್ರಾಮಸ್ಥರು ಹಾಗೂ ಯಕ್ಷಗಾನ ಅಭಿಮಾನಿಗಳು ಒಟ್ಟಾಗಿ ಸೇರಿ ನಡೆಸುತ್ತಿದ್ದ ಈ ಕಾರ್ಯಕ್ರಮಕ್ಕೆ ಯಾರೋ ಒಬ್ಬ ದೂರವಾಣಿ ಮೂಲಕ ದೂರು ನೀಡಿದ ಎನ್ನುವ ಕಾರಣಕ್ಕಾಗಿ ಪೊಲೀಸರು ಈ ರೀತಿ ವರ್ತಿಸಿರುವುದು ಖೇದಕರ. ಇದು ಯಕ್ಷಗಾನ ಕಲೆಗೆ ಮಾಡಿದ ಅವಮಾನ. ದೂರು ನೀಡಿದ ಯಾವುದೇ ವ್ಯಕ್ತಿಯಾಗಲಿ, ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತರಾಗಲಿ, ಅಥವಾ ನಾಯಕರಾಗಲಿ ಇಂತಹ ನೀಚ ಕೆಲಸಕ್ಕೆ ಕೈ ಹಾಕಬಾರದು. ಇವರ ಇಂತಹ ವರ್ತನೆಯಿಂದ ಇಡೀ ಕರಾವಳಿ ಭಾಗದ ಸಮಸ್ತ ಜನತೆಯು, ಕಲೆ ಹಾಗೂ ಧಾರ್ಮಿಕತೆ ಮೇಲೆ ಇಟ್ಟಿರುವ ನಂಬಿಕೆಯ ಮೇಲೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ.

ಯಕ್ಷಗಾನ ನಡೆಯದಂತೆ ದೂರು ನೀಡಿದ ಯಾರೇ ಆಗಲಿ, ಕರಾವಳಿ ಜನತೆಗೆ ಕ್ಷಮೆ ಕೇಳಬೇಕು. ಹಾಗೆಯೇ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ದಾಖಲಾಗಿರುವ ಪ್ರಕರಣವನ್ನು ಈ ಕೂಡಲೇ ಕೈಬಿಡಬೇಕೆಂದು ಯಕ್ಷಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ ಆಗ್ರಹಿಸಿದ್ದಾರೆ.
ಯಕ್ಷಗಾನವನ್ನು ನಂಬಿ ಬದುಕುವ ಸಾವಿರಾರು ಕುಟುಂಬಗಳು ಕರಾವಳಿಯಲ್ಲಿ ಇವೆ. ದಿನಕ್ಕೆ ಕೋಟಿಗಿಂತಲೂ ಅಧಿಕ ಯಕ್ಷಗಾನ ಪ್ರದರ್ಶನಗಳಿಂದ ಆರ್ಥಿಕ ವ್ಯವಹಾರ ನಡೆಯುತ್ತದೆ. ಇಂತಹ ಒಂದು ಪ್ರಕರಣಗಳು ಮುಂದುವರೆದರೆ ಕರಾವಳಿಯ ಆರ್ಥಿಕತೆಗೂ ಪೆಟ್ಟು ಬೀಳಲಿದೆ.

ಯಕ್ಷಕಲಾರಂಗ ರಿ. ಕಾರ್ಕಳ ಕಲೆಯನ್ನು ಬೆಳೆಸಿ- ಪ್ರೋತ್ಸಾಹಿಸುವ ನಿರಂತರ ಕಾರ್ಯ ಮಾಡುತ್ತಾ ಬಂದಿದೆ. ಒಂದು ವೇಳೆ ಯಕ್ಷಗಾನ ಆಗಲೀ, ಇತರ ಯಾವುದೇ ಕಲೆ ಆಗಲಿ, ಇಂತಹ ಆತಂಕದ ಪರಿಸ್ಥಿತಿ ನಿರ್ಮಾಣಗೊಂಡರೆ ಯಕ್ಷಕಲಾರಂಗವು ಯಾವ ಹೋರಾಟಕ್ಕೂ ತಯಾರಿದೆ ಎಂದು ಕಾರ್ಕಳ ಕಲಾರಂಗ ಎಚ್ಚರಿಸಿದೆ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *