ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ನಾನು ಖಂಡಿತ ಆಕಾಂಕ್ಷಿಯಲ್ಲ, ಪ್ರಧಾನ ಕಾರ್ಯದರ್ಶಿಯ ಹುದ್ದೆಯನ್ನೇ ನಿಭಾಯಿಸಲಾಗುತ್ತಿಲ್ಲ ಅಂದಮೇಲೆ ರಾಜ್ಯಾಧ್ಯಕ್ಷ ಸ್ಥಾನ ನನಗೆ ಬೇಕಿಲ್ಲ ಎಂದದು ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಅಧ್ಯಕ್ಷನ ಆಯ್ಕೆಗೆ ಚುನಾವಣೆ ನಡೆಯಲ್ಲ, ಅದೊಂದು ಔಪಚಾರಿಕತೆ, ಸರ್ವಾನುಮತದಿಂದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ನಾನು ಯಾವುದೇ ಬಣ ರಾಜಕಾರಣದಲ್ಲಿ ಇಲ್ಲ, ಬಿಜೆಪಿಯ ಹಿತದೃಷ್ಠಿಯಿಂದ ನನಗೆ ಅನ್ನಿಸಿದ್ದನ್ನು ಹೇಳಬೇಕಾಗಿರುವವರಿಗೆ ಹೇಳಿದ್ದೇನೆ ಪಕ್ಷಕ್ಕೆ ಮುಂದೆಯೂ ಬದ್ಧನಾಗಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿನ ಬಣ ರಾಜಕೀಯದಿಂದಾಗಿ ತಳಮಟ್ಟದ ಕಾರ್ಯಕರ್ತರಿಗೆ ನೋವಾಗಿದೆ. ಆದ್ದರಿಂದ ಇದೆಲ್ಲ ಆದಷ್ಟು ಬೇಗ ಬಗೆಹರಿಯಬೇಕಿದೆ ಎಂದರು.