Share this news

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಾದು ಹೋಗುವ ಲೋಕೋಪಯೋಗಿ ಇಲಾಖೆ ಅಧೀನದಲ್ಲಿ ಬರುವ ಪ್ರಮುಖ ನಗರಗಳನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಗಳನ್ನು ಹಾಗೂ ಜಿಲ್ಲಾ ಮುಖ್ಯ ಸಂಪರ್ಕ ರಸ್ತೆಗಳನ್ನು ಮತ್ತು ಸೇತುವೆಗಳನ್ನು ಅಭಿವೃದ್ಧಿಪಡಿಸಲು ಶಾಸಕರಾದ ವಿ ಸುನಿಲ್ ಕುಮಾರ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದೀಗ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ ಒಟ್ಟು ರೂ. 13.00 ಕೋಟಿ ಅನುದಾನ ಬಿಡುಗಡೆಯಾಗಿದೆ.

ಮುದ್ರಾಡಿ – ಹೆಬ್ರಿ-ಬ್ರಹ್ಮಾವರ ರಾಜ್ಯ ಹೆದ್ದಾರಿ ಮುದ್ರಾಡಿ ಪೇಟೆಯಿಂದ ಜರುವತ್ತು ಸೇತುವೆ ವರೆಗೆ ರಸ್ತೆಯ ನವೀಕರಣಕ್ಕೆ ರೂ. 120.00 ಲಕ್ಷ, ಸುಬ್ರಹ್ಮಣ್ಯ-ಉಡುಪಿ ರಾಜ್ಯ ಹೆದ್ದಾರಿ-37ರ ಚೆಂಡೆ ಬಸದಿ ಕ್ರಾಸ್-ಬಜಗೋಳಿವರೆಗೆ ರಸ್ತೆಯನ್ನು ನವೀಕರಣಗೊಳಿಸಲು ರೂ.150.00 ಲಕ್ಷ, ಕಾಂಜರಕಟ್ಟೆ – ಇನ್ನಾ – ಸಾಂತೂರು ಕೊಪ್ಪ ಮುಂಡೂರು ಕಜೆಮಾರಿಗುಡಿ-ಸಚ್ಚರಿಪೇಟೆ ಜಿಲ್ಲಾ ಮುಖ್ಯರಸ್ತೆ ಅಭಿವೃದ್ಧಿಗೆ ರೂ 100.00 ಲಕ್ಷ, ಬೆಳುವಾಯಿ-ಕಾಂತಾವರ-ಮAಜರಪಲ್ಕೆ ಜಿಲ್ಲಾಮುಖ್ಯ ರಸ್ತೆಯ ವಂಜಾರಕಟ್ಟೆಯಿAದ ಬೋಪಾಡಿ ಸೇತುವೆ ವರೆಗೆ ರಸ್ತೆ ಅಭಿವೃದ್ಧಿಗೆ ರೂ 180.00 ಲಕ್ಷ, ಅಜೆಕಾರು-ಹೆರ್ಮುಂಡೆ-ಜಾರ್ಕಳ-ಕೆರವಾಶೆ ಜಿಲ್ಲಾಮುಖ್ಯ ರಸ್ತೆಯನ್ನು ಅಭಿವೃದ್ಧಿಗೆ ರೂ. 250.00, ದುರ್ಗಾ-ಮುಂಡ್ಲಿ-ಶಿರ್ಲಾಲು ಜಿಲ್ಲಾಮುಖ್ಯ ರಸ್ತೆಯನ್ನು ಅಭಿವೃದ್ಧಿಗೆ ರೂ. 250.00 ಲಕ್ಷ, ಮುಡಾರು ರಾಜ್ಯಹೆದ್ದಾರಿ ರಾಮೇರುಗುತ್ತು ಬಳಿ ಶಿಥಿಲಗೊಂಡಿರುವ ಕಿರಿದಾದ ಹಳೆಯ ಸೇತುವೆ ಮರುನಿರ್ಮಣಕ್ಕೆ ರೂ 100.00 ಲಕ್ಷ, ಹಾಗೂ ಬೆಳುವಾಯಿ-ಕಾಂತಾವರ-ಮAಜರಪಲ್ಕೆ ಜಿಲ್ಲಾಮುಖ್ಯ ರಸ್ತೆಯಲ್ಲಿ ಅತಿಯಾದ ಮಳೆಯಿಂದ ಹಾನಿಗೊಂಡಿರುವ ಕಿರಿದಾದ ಸೇತುವೆ (ಬರಬೈಲು) ಮರುನಿರ್ಮಾಣಕ್ಕೆ ರೂ. 150.00 ಲಕ್ಷ ಬಿಗುಗಡೆಯಾಗಿದೆ.

ಈ ರಸ್ತೆಗಳು ಮತ್ತು ಸೇತುವೆಗಳು ಈ ಅನುದಾನದಲ್ಲಿ ಅಭಿವೃದ್ಧಿಗೊಂಡು ಸಾರ್ವಜನಿಕ ಸಂಚಾರಕ್ಕೆ ಇನ್ನಷ್ಟು ಅನುಕೂಲಕರವಾಗಲಿದೆ ಎಂದು ಶಾಸಕರ ಪ್ರಕಟಣೆ ತಿಳಿಸಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *