ನವದೆಹಲಿ: ಪೊಲೀಸರು ವಾಟ್ಸಾಪ್, ಇ-ಮೇಲ್‌ಗಳ ಮೂಲಕ ಆರೋಪಿಗಳಿಗೆ ನೋಟಿಸ್ ಕಳುಹಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ನ್ಯಾಯಾಲಯಗಳ ಕಲಾಪಗಳಲ್ಲಿ ತಂತ್ರಜ್ಞಾನ ಬಳಕೆಯಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದರೂ ಪೋಲಿಸರು ಮತ್ತು ಕಾನೂನು ಜಾರಿ ಸಂಸ್ಥೆಗಳು ಸಿಆರ್‌ಪಿಸಿಯ ಕಲಂ 41ಎ ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾದ ಕಲಂ 35ರಡಿ ವಾಟ್ಸಾಪ್ ಅಥವಾ ಇತರ ವಿದ್ಯುನ್ಮಾನ ವಿಧಾನಗಳ ಮೂಲಕ ಬಂಧನ-ಪೂರ್ವ ನೋಟಿಸ್‌ಗಳನ್ನು ಕಳುಹಿಸುವಂತಿಲ್ಲ ಎಂದು ಹೇಳಿದೆ.
ನ್ಯಾಯಮೂರ್ತಿ ಎಂಎA ಸುಂದರೇಶ್ ಮತ್ತು ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರ ಪೀಠವು ಸಿಆರ್‌ಪಿಸಿ ಅಥವಾ ಬಿಎನ್‌ಎಸ್‌ಎಸ್ ಅಡಿಯಲ್ಲಿ ನಿಗದಿತ ಸೇವಾ ವಿಧಾನದ ಮೂಲಕ ಮಾತ್ರ ಅಂತಹ ಸೂಚನೆಗಳನ್ನು ನೀಡುವಂತೆ ರಾಜ್ಯ ಸರ್ಕಾರಗಳಿಗೆ ಆದೇಶಗಳನ್ನು ನೀಡುವಂತೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಆದೇಶಗಳನ್ನು ಆಯಾ ಪೊಲೀಸ್ ಇಲಾಖೆಗಳಿಗೆ ನೀಡುವಂತೆ ಸೂಚಿಸಿದೆ.
ವಾಟ್ಸಾಪ್ ಅಥವಾ ಇತರ ವಿದ್ಯುನ್ಮಾನ ವಿಧಾನಗಳ ಮೂಲಕ ನೋಟಿಸ್‌ಗಳನ್ನು ಹೊರಡಿಸುವುದನ್ನು ಸಿಆರ್‌ಪಿಸಿ,1973/ಬಿಎನ್‌ಎಸ್‌ಎಸ್, 2023ಯಲ್ಲಿ ಗುರುತಿಸಲಾಗಿರುವ ಮತ್ತು ಸೂಚಿಸಲಾಗಿರುವ ವಿಧಾನಗಳಿಗೆ ಪರ್ಯಾಯವಾಗಿ ಅಥವಾ ಬದಲಿಯಾಗಿ ಪರಿಗಣಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.