Share this news

ಉಡುಪಿ:ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡದೇ ತಾರತಮ್ಯ ಎಸಗಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ಆರೋಪಿಸಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2025-26 ನೇ ಸಾಲಿನಲ್ಲಿ 50,65,345 ಕೋಟಿ ರೂ ಬಜೆಟ್ ನಲ್ಲಿ ರಾಜ್ಯಕ್ಕೆ ಯಾವುದೇ ಹೊಸ ಯೋಜನೆಗಳನ್ನು ನೀಡಿಲ್ಲ ಜತೆಗೆ ಕರಾವಳಿ ಕರ್ನಾಟಕಕ್ಕೆ ದ್ರೋಹ ಬಗೆಯಲಾಗಿದೆ ಎಂದು ಬಿಪಿನ್ ಆರೋಪಿಸಿದ್ದಾರೆ.

ಕರಾವಳೀ ಕರ್ನಾಟಕದ ಮೀನುಗಾರರು, ಬಂದರು ಕೈಗಾರಿಕೆ, ರೈತರು ಹಾಗೂ ಕೃಷಿಗೆ ಸಂಬಂದ ಪಟ್ಟಂತೆ ರಾಜ್ಯ ಸರಕಾರದ ಆದ್ಯತಾ ವಲಯದ ಬೇಡಿಕೆಗಳ ಹೊರತಾಗಿಯೂ ಬಜೆಟ್ ನಲ್ಲಿ ಯಾವುದೇ ಯೋಜನೆಗಳ ಪ್ರಸ್ತಾವನೆ ಇಲ್ಲದಿರುವುದು ವಿಷಾದನೀಯ. ರೈತರ ಉತ್ಪಾದನೆಗೆ ಯಾವುದೇ ನಿರ್ದಿಷ್ಟ ಯೋಜನೆಗಳಿಲ್ಲ. ಕನಿಷ್ಠ ಬೆಂಬಲ ಬೆಲೆ ನಿಗದಿ, ಸಾಲಮನ್ನಾ ಬಗ್ಗೆ ಬಿಜೆಪಿ ಮೌನ ವಹಿಸಿದೆ. ರಾಜ್ಯ ಸರಕಾರ ಈಗಾಗಲೇ ಕೇಂದ್ರದ ಮುಂದಿಟ್ಟ ನೀರಾವರಿ ಯೋಜನೆಗಳನ್ನು ಬಜೆಟಿನಲ್ಲಿ ಅವಗಣಿಸಲಾಗಿರುವುದು ಇಲ್ಲಿನ ಅವರದ್ದೇ ಪಕ್ಷದ ಸಂಸದರ ವೈಪಲ್ಯವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ಮಹಿಳಾ ಸಬಲೀಕರಣದ ಬಗ್ಗೆ ಯಾವುದೇ ನಿಗದಿತ ಸಮರ್ಪಕ ಯೋಜನೆಗಳಿಲ್ಲ. ಮೇಲ್ವರ್ಗದ ಉದ್ಯಮಿಗಳನ್ನು ಓಲೈಸಿರುವ ಬಜೆಟ್ ಮಧ್ಯಮ ವರ್ಗದ ಆದಾಯದ ಮೂಲವನ್ನು ಹಚ್ಚಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಮಹಿಳಾ ಸಬಲೀಕರಣದ ಬಗ್ಗೆ ಯಾವುದೇ ನಿಗದಿತ ಕಾರ್ಯಯೋಜನೆಗಳ ಪ್ರಸ್ತಾವನೆ ಇಲ್ಲ. ಪರಿಶಿಷ್ಟ ಜಾತಿ, ಪಂಗಡ ಹಿಂದುಳಿದ ವರ್ಗದ ಸಂಪೂರ್ಣ ನಿರ್ಲಕ್ಷ್ಯವೇ ಈ ಬಜೆಟ್ಟಿನ ಮಹಾ ಸಾಧನೆಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *