ಸುರತ್ಕಲ್: ಲಾರಿಯೊಂದನ್ನ ಓವಟೇಕ್ ಮಾಡಲು ಹೋಗಿ ಬೈಕ್ ಅಪಘಾತಕ್ಕೀಡಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ರಾ.ಹೆ. 66ರ ಮುಕ್ಕ ಬ ಚೆಕ್ ಪೋಸ್ಟ್ ಬಳಿ ನಡೆದಿದೆ.
ಮುಲ್ಕಿ ಲಿಂಗಪ್ಪಯ್ಯಕಾಡು ನಿವಾಸಿ ಎನ್‌ಎಂಪಿಎ ಹೊರಗುತ್ತಿಗೆ ನೌಕರ ಪ್ರದೀಪ್ ಕುಮಾರ್ (28) ಗಾಯಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎನ್‌ಎಂಪಿಎಯಲ್ಲಿ ಕೆಲಸ ಮಗಿಸಿಕೊಂಡು ಮುಲ್ಕಿ ಕೊಲ್ನಾಡುವಿನ ಲಿಂಗಪ್ಪಯ್ಯಕಾಡಿನ ಮನೆಗೆ ಹೋಗುತ್ತಿದ್ದ ಪ್ರದೀಪ್ ಮುಲ್ಕಿ ಕಡೆಗೆ ತೆರಳುತ್ತಿದ್ದ ಮೆಸ್ಕಾಂನ ಲಾರಿಯನ್ನು ಎಡಭಾಗದಿಂದ ಓವರ್‌ಟೇಕ್ ಮಾಡಲು ಯತ್ನಿಸಿದ್ದು ಬೈಕ್ ಸವಾರನ ನಿಯಂತ್ರಣ ತಪ್ಪಿ ಲಾರಿಯಡಿಗೆ ಬಿದ್ದಿದ್ದು, ಪ್ರದೀಪ್ ಗಂಭೀರ ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.