ಚಿತ್ರ ಕೃಪೆ: ಸಾಯಿಪ್ರಕಾಶ್ ಸ್ಟುಡಿಯೋ,ಮುನಿಯಾಲು
ಕಾರ್ಕಳ: ಹೆಬ್ರಿ ಕಡೆಯಿಂದ ಬಜಗೋಳಿ ಕಡೆಗೆ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ಕಾಡುಹೊಳೆ ಸೇತುವೆ ಬಳಿ ತೋಡಿಗೆ ಉರುಳಿಬಿದ್ದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ಬಜಗೋಳಿಯ ಅರ್ಚಕರೊಬ್ಬರಿಗೆ ಸೇರಿದ್ದ ಮಾರುತಿ ರಿಡ್ಜ್ ಕಾರು ಇದಾಗಿದ್ದು, ಅವರೇ ಕಾರು ಚಲಾಯಿಸಿಕೊಂಡು ಹೆಬ್ರಿಯಿಂದ ಅಜೆಕಾರು ಮಾರ್ಗವಾಗಿ ಬಜಗೋಳಿಗೆ ತೆರಳುವ ವೇಳೆ ಈ ಅಪಘಾತ ಸಂಭವಿಸಿದ್ದು,ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಉರುಳಿಬಿದ್ದಿದೆ ಎನ್ನಲಾಗಿದೆ. ಅಪಘಾತದಲ್ಲಿ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದು, ಕಾರು ಬಹುತೇಕ ಜಖಂಗೊಂಡಿದೆ.