ಕಾರ್ಕಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಅನಾರೋಗ್ಯದ ಕಾರಣಕ್ಕೆ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮೀ ಹಣ ಬಿಡುಗಡೆ ವಿಳಂಬ ಹೇಳಿಕೆ ಸಮಂಜಸವಲ್ಲ. ಆರೋಗ್ಯ ಸರಿಯಿಲ್ಲದಿದ್ದರೆ ಸಂಬAಧಪಟ್ಟ ಇಲಾಖೆ, ಅಧಿಕಾರಿಗಳು, ಸಹಾಯಕರು ಇದ್ದಾರೆ. ಗೃಹಲಕ್ಷ್ಮೀ ಯೋಜನೆಗೆ ಹಣ ತಮ್ಮ ಖಾಸಗಿ ಖಾತೆಯಿಂದಲ್ಲ ಸರಕಾರದ ಖಜಾನೆಯಿಂದ, ಜನರ ತೆರಿಗೆಯ ಹಣದಿಂದ ನೀಡುವಂತದ್ದು. ಅನಾರೋಗ್ಯದ ಕುಂಟು ನೆಪವೊಡ್ಡಿ ಸರಕಾರದ ಹುಳುಕನ್ನು ಮುಚ್ಚಿ ಹಾಕುವ ಪ್ರಯತ್ನ ಎಂದು ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಆರೋಪಿಸಿದೆ.
ಉಪಚುನಾವಣೆ ಸಂದರ್ಭಗಳಲ್ಲಿ ತರಾತುರಿಯಲ್ಲಿ ಹಣ ಹಾಕುವ ವ್ಯವಸ್ಥೆ ಇರುವಾಗ ಬಾಕಿ ಸಮಯದಲ್ಲಿ ತಡವೇಕೆ? ಮಾನ್ಯ ಸಚಿವರ ಆರೋಗ್ಯ ಶೀಘ್ರ ಗುಣಮುಖವಾಗಲಿ ಎಂಬ ಆಶಯ ನಮ್ಮದು ಕೂಡ ಇದೆ. ಹಾಗಂತ ಚುನಾವಣೆ ಸಂದರ್ಭದಲ್ಲಿ ನೀಡಿದ ವಚನಕ್ಕೆ ಬದ್ಧರಾಗಿ ಸಮಯಕ್ಕೆ ಸರಿಯಾಗಿ ರಾಜ್ಯದ ಬಡ ಮಹಿಳೆಯರ ಖಾತೆಗೆ ಹಣ ಜಮಾ ಮಾಡಬೇಕು ಎಂದು ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ವಿನಯ ಡಿ ಬಂಗೇರ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

