ನವದೆಹಲಿ : ಅಯೋಧ್ಯೆ ರಾಮಮಂದಿರದ ಮೇಲೆ ದಾಳಿಗೆ ಯತ್ನಿಸಿದ್ದ ಶಂಕಿತ ಉಗ್ರನನ್ನು ಎಟಿಎಸ್ ಕೇಂದ್ರ ಏಜೆನ್ಸಿಗಳು ಮತ್ತು ಫರಿದಾಬಾದ್ ಎಸ್ಟಿಎಫ್ನೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಫರಿದಾಬಾದ್ನಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ಫೈಜಾಬಾದ್ ನಿವಾಸಿ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಭದ್ರತಾ ಪಡೆಗಳು ಅವನ ಬಳಿಯಿದ್ದ 2 ಹ್ಯಾಂಡ್ ಗ್ರೆನೇಡ್ಗಳನ್ನು ವಶಪಡಿಸಿಕೊಂಡಿವೆ. ಮೂಲಗಳ ಪ್ರಕಾರ, ರಾಮ ಮಂದಿರ ಅವನ ಟಾರ್ಗೆಟ್ ಪಟ್ಟಿಯಲ್ಲಿತ್ತು.
ಗುಜರಾತ್ ಎಟಿಎಸ್ನ ಕಾರ್ಯಾಚರಣೆ ಮುಂದುವರೆದಿದ್ದು, ಹೆಚ್ಚಿನ ಮಾಹಿತಿಗಾಗಿ ಗುಜರಾತ್ ಎಟಿಎಸ್ ರೆಹಮಾನ್ನನ್ನು ವಿಚಾರಣೆ ನಡೆಸುತ್ತಿದೆ.
ಉಗ್ರ ರೆಹಮಾನ್ ಭಯೋತ್ಪಾದಕ ದಾಳಿ ನಡೆಸಲು ಸಜ್ಜಾಗಿದ್ದಾನೆಂದು ಮಾಹಿತಿ ಸಿಕ್ಕಿದ ಹಿನ್ನಲೆಯಲ್ಲಿ ಹರಿಯಾಣ ಪೊಲೀಸರ ಪಲ್ವಾಲ್ ಎಸ್ಟಿಎಫ್ಗೆ ಹಸ್ತಾಂತರಿಸಲಾಯಿತು. ಎಸ್ಟಿಎಫ್ ಕಾರ್ಯಪ್ರವೃತ್ತರಾಗಿ ಗುಜರಾತ್ ಎಟಿಎಸ್ ಹಂಚಿಕೊAಡ ಅಬ್ದುಲ್ನ ಚಿತ್ರದೊಂದಿಗೆ ಪರಿಶೀಲಿಸಿಇ, ಪಲ್ವಾಲ್ ಎಸ್ಟಿಎಫ್ ಮತ್ತು ಗುಜರಾತ್ ಎಟಿಎಸ್ನ ಜಂಟಿ ತಂಡಗಳು ಫರಿದಾಬಾದ್ನ ಪಾಲಿಯ ಬನ್ಸ್ ರಸ್ತೆಯಲ್ಲಿ ಅಬ್ದುಲ್ನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಬಳಿಕ ಅಬ್ದುಲ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹರಿಯಾಣ ಎಸ್ಟಿಎಫ್ನ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

K