ಉಡುಪಿ : ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಆಪೆ ರಿಕ್ಷಾ ಪಲ್ಟಿ ಯಾಗಿ ಡಿವೈಡರ್ ಗೆ ಹೊಡೆದ ಘಟನೆ ಉಡುಪಿಯ ಗುಂಡಿಬೈಲ್ ರಸ್ತೆಯ ವಿಶಾಲ್ ಮಾರ್ಟ್ ಮುಂಭಾಗ ಇಂದು ಸಂಜೆ ನಡೆದಿದೆ.
ರಿಕ್ಷಾ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಣಿಪಾಲದಿಂದ ಸಂತೆಕಟ್ಟೆ ಕಡೆಗೆ ಗುಂಡಿಬೈಲ್ ಮಾರ್ಗವಾಗಿ ಬರುತ್ತಿದ್ದ ಲಾರಿಗೆ ಅದೇ ದಾರಿಯಲ್ಲಿ ಉಡುಪಿಯಿಂದ ಹಾಲಾಡಿ ಕಡೆಗೆ ಹೋಗುತ್ತಿದ್ದ ರಿಕ್ಷಾ, ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಡಿವೈಡರ್ ಗೆ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

K