ಕಾರ್ಕಳ: ಕಾರ್ಕಳ ತಾಲೂಕಿನ ನೀರೆಯಲ್ಲಿ ಸ್ಕೂಟರ್ಗೆ ಅಪಘಾತವೆಸಗಿ ಪರಾರಿಯಾಗಿದ್ದ ಕಾರನ್ನು ಕಾರ್ಕಳ ನಗರ ಪೊಲೀಸರು ಉಜಿರೆಯಲ್ಲಿ ಪತ್ತೆ ಹಚ್ಚಿದ್ದಾರೆ.
ನೀರೆ ಗ್ರಾಮದ ಜಡ್ಡಿನಂಗಡಿ ಬಳಿ ಕಳೆದ ಫೆ.26ರಂದು ಸ್ಕೂಟರ್ ಗೆ ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ರಾಜೇಶ್ ಶೆಟ್ಟಿ (35) ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಮಾನವೀಯತೆ ತೋರದ ಕಾರಿನ ಚಾಲಕ ಮತ್ತು ಪ್ರಯಾಣಿಕರು ಅಲ್ಲಿಂದ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಗುಡ್ಡೆಯಂಗಡಿ ಪೆಟ್ರೋಲ್ ಬಂಕ್ನ ಸಿ.ಸಿ.ಕ್ಯಾಮರಾದಲ್ಲಿ ಪತ್ತೆಯಾದ ಚಿತ್ರಣವನ್ನು ಆಧರಿಸಿ ಕಳೆದ 8 ದಿನಗಳಿಂದ ಪೊಲೀಸರು ತನಿಖೆ ಆರಂಭಿಸಿದ್ದರು. ಈ ನಡುವೆ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೀಗ ಗುರುವಾರ ಉಜಿರೆಯಲ್ಲಿ ಅಪಘಾತವೆಸಗಿದ ವಾಹನ ಪತ್ತೆ ಹಚ್ಚಲಾಗಿದೆ. ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದ ಈ ಕಾರು ಅಪಘಾತವೆಸಗಿ ಪರಾರಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

K