ಅಜೆಕಾರು: ಕಾರ್ಕಳ ತಾಲೂಕು ಕುಕ್ಕುಜೆ ಗ್ರಾಮದ ನಿವಾಸಿ ರಿಕ್ಷಾ ಚಾಲಕ ವ್ಯಕ್ತಿಯೊಬ್ಬರು ಮಾ.7 ರಿಂದ ನಾಪತ್ತೆಯಾಗಿದ್ದಾರೆ. ಕುಕ್ಕುಜೆಯ ಸೂರ್ಯ (52ವ) ನಾಪತ್ತೆಯಾದವರು.
ಸೂರ್ಯ ಅವರು ಪೆರ್ಡೂರು ಮೇಲ್‌ಪೇಟೆಯಲ್ಲಿ ರಿಕ್ಷಾ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು, ಮಾ.7 ರಂದು ಬೆಳಿಗ್ಗೆ 11 ಗಂಟೆಗೆ ಪೆರ್ಡೂರಿಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಈವರೆಗೆ ಮನೆಗೆ ಬಾರದೇ ಸಂಬAದಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
K