ಕಾರ್ಕಳ : ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ 2 ಟಿಪ್ಪರ್ ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಚಾಲಕರು ಪರಾರಿಯಾಗಿದ್ದಾರೆ.
ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ತನಿಖೆ) ಶಿವಕುಮಾರ್ ಎಸ್. ಆರ್. ಅವರು ಕಸಬಾ ಗ್ರಾಮದ ಸರ್ವಜ್ಞ ಸರ್ಕಲ್ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಪುಲ್ಕೇರಿ ಬೈಪಾಸ್ ಕಡೆಯಿಂದ 2 ಟಿಪ್ಪರ ಲಾರಿಗಳು ಬರುತ್ತಿದ್ದು ನಿಲ್ಲಿಸುವಂತೆ ಸೂಚನೆ ನೀಡಿದಾಗ ಸ್ವಲ್ಪ ದೂರದಲ್ಲಿಯೇ ನಿಲ್ಲಿಸಿ ಅದರ ಚಾಲಕರು ಟಿಪ್ಪರ್ ಲಾರಿಯಿಂದ ಇಳಿದು ಓಡಿ ಹೋಗಿದ್ದಾರೆ.
ಟಿಪ್ಪರ್ ಲಾರಿಗಳನ್ನು ಪರಿಶೀಲಿಸಲಾಗಿ ಎಲ್ಲಿಯೋ ಸರಕಾರಿ ಸ್ಥಳದಿಂದ ಮರಳನ್ನು ಕಳವು ಮಾಡಿ KA-19-AD-0602 ಹಾಗೂ KA-19-D-5716ನೇ ನಂಬ್ರದ ಟಿಪ್ಪರ ಲಾರಿಗಳಲ್ಲಿ ತಲಾ 3 ಯೂನಿಟ್ ಮರಳನ್ನು ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿ ತಿಳಿದು ಬಂದಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
K