ಅಜೆಕಾರು: ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ಏಪ್ರಿಲ್ 14ರಿಂದ 19 ವರೆಗೆ ಶ್ರೀ ಮನ್ಮಹಾರಥೋತ್ಸವವು ಕೊರಂಗ್ರಪಾಡಿ ಶ್ರೀ ವಾದಿರಾಜ ತಂತ್ರಿಗಳ ನೇತೃತ್ವದಲ್ಲಿ ಜರುಗಲಿರುವುದು.
ಏಪ್ರಿಲ್ 14ರಂದು ಧ್ವಜಾರೋಹಣ ಬಳಿಕ ಇತರ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದ್ದು ರಾತ್ರಿ ಶ್ರೀ ವಿಷ್ಣುಮೂರ್ತಿ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಅಜೆಕಾರು ಇವರಿಂದ ಯಕ್ಷಗಾನ ಸೇವೆಯಾಟ ಇಂದ್ರಜಿತು ಕಾಳಗ- ಸಮುದ್ರ ಮಥನ ನಡೆಯಲಿದೆ.
ಏಪ್ರಿಲ್ 15ರಂದು ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷಾ ಬಲಿದಾನ ಹಾಗೂ ಇತರ ಧಾರ್ಮಿಕ ಕಾರ್ಯಗಳು, ಏಪ್ರಿಲ್ 14ರಂದು ಬುಧವಾರ ಮಧ್ಯಾಹ್ನ ಮಹಾ ಚಂಡಿಗಾಯಾಗ ಹಾಗೂ ಇತರ ಧಾರ್ಮಿಕ ಪೂಜಾ ಕಾರ್ಯಗಳು, ಸಂಜೆ 5.30 ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ಏಪ್ರಿಲ್ 17ರಂದು ದೇವರ ರಥಾರೋಹಣ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ರಾತ್ರಿ 7 ರಿಂದ ರಥೋತ್ಸವ ನಡೆಯಲಿದೆ.
ಏಪ್ರಿಲ್ 18ರಂದು ಹಗಲು ರಥೋತ್ಸವ, ದೈವಗಳ ಕೋಲ ಅವಭೃತ ಸ್ನಾನ, ಕಟ್ಟೆ ಪೂಜೆ ಧ್ವಜಾವರೋಹಣ ನಡೆಯಲಿದೆ.
ಏ. 19ರಂದು ಮಹಾಪೂಜೆ ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ ಹಾಗೂ ದುರ್ಗಾಪರಮೇಶ್ವರಿ ಅಮ್ಮನವರಿಗೆ ಸಣ್ಣ ರಂಗ ಪೂಜೆ, ಮಾರಿ ನಡೆಯಲಿದೆ.
ಗ್ರಾಮದೇವರ ಈ ವಾರ್ಷಿಕ ಉತ್ಸವದಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಈ ಮೂಲಕ ವಿನಂತಿಸಲಾಗಿದೆ.