ಕಾರ್ಕಳ: ಹೋಟೆಲ್ ಕೆಲಸಕ್ಕೆಂದು ಕಾರ್ಕಳದಿಂದ ಶಿಕಾರಿಪುರಕ್ಕೆ ಹೋಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ.
ಕಾರ್ಕಳ ತಾಲೂಕಿನ ಮುಂಡ್ಕೂರು ನಿವಾಸಿ ನಾಗ ಪ್ರಶಾಂತ್ (42 ವರ್ಷ) ನಾಪತ್ತೆಯಾದವರು.
ನಾಗ ಪ್ರಶಾಂತ ಅವರು ಮುಂಡ್ಕೂರಿನ ದೇವಿಪ್ರಸಾದ್ ರೈ ಎಂಬವರ ಶಿಕಾರಿಪುರ ಹೈವೇಯಲ್ಲಿರುವ ಹೋಟೆಲ್‌ನಲ್ಲಿ ಕೆಲಸ ಮಾಡಲು ಏ.3 ರಂದು ಶಿಕಾರಿಪುರಕ್ಕೆ ಹೋಗಿದ್ದು, ಎ.4 ರಂದು ಶಿಕಾರಿಪುರ ತಲುಪಿರುವುದಾಗಿ ತನ್ನ ತಮ್ಮನಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ದೇವಿಪ್ರಸಾದ್ ಅವರು ನಾಗಪ್ರಶಾಂತ್ ರನ್ನು ಹೊಟೇಲಿಗೆ ಕರೆದುಕೊಂಡು ಹೋಗಿದ್ದು ಅಲ್ಲಿ ನಾಗ ಪ್ರಶಾಂತ್ ಮದ್ಯಪಾನ ಮಾಡಿದ ಕಾರಣ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳದೆ ಬಸ್ಸಿಗೆ ಹಣ ನೀಡಿ ವಾಪಾಸು ಊರಿಗೆ ಕಳುಹಿಸಿದ್ದರು.
ಅಲ್ಲಿಂದ ಬಂದಿದ್ದ ನಾಗ ಪ್ರಶಾಂತ್ ಶಿವಮೊಗ್ಗ ತಲುಪಿದಾಗ ತಮ್ಮನಿಗೆ ಕರೆ ಮಾಡಿದ್ದರು. ಆದರೆ ಆ ನಂತರ ನಾಗ ಪ್ರಶಾಂತ್ ಗೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಈವರೆಗೂ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.