ಉಡುಪಿ : ಕಾರ್ಕಳ ಉಡುಪಿ ರಾಜ್ಯ ಹೆದ್ದಾರಿಯ ಗಂಪ ಕ್ರಾಸ್ ಬಳಿ ಖಾಸಗಿ ಬಸ್ ಹಾಗೂ ಪಿಕಪ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಪಿಕಪ್ ಚಾಲಕ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಏ 14 ರಂದು ಸೋಮವಾರ ಸಂಜೆ ಈ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಪಿಕಪ್ ಚಾಲಕ ಕೋಟೇಶ್ವರದ ನಿವಾಸಿಗಳಾದ ಅಚ್ಯುತ(46) ಹಾಗೂ ರಾಘವೇಂದ್ರ(44) ಮೃತಪಟ್ಟವರು. ಸನ್ ರೈಸ್ ಪಿವಿಪಿ ಪೈಪ್ ಕಂಪೆನಿಯ ಪಿಕಪ್ ವಾಹನ ಪೈಪ್ ಖಾಲಿ ಮಾಡಿ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದಾಗ ಉಡುಪಿಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಲಕ್ಷಿö್ಮÃ ಗಣೇಶ್ ಬಸ್ಸು ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ತೀವೃತೆಗೆ ಪಿಕಪ್ ವಾಹನದ ಹಿಂಬದಿಯ ಭಾಗ ತುಂಡಾಗಿ ನುಜ್ಜುಗುಜ್ಜಾಗಿ ಚಾಲಕ ಹೊರಗೆಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರ್ಘಟನೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಬಸ್ ಚಾಲಕನ ಅಜಾಗರೂಕತೆ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ