ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಗುರುವಾರ ಬೆಳಗ್ಗೆ ನಿಗೂಢ ಸ್ಪೋಟ ಸಂಭವಿಸಿದೆ ಎನ್ನುವ ಮಾಹಿತಿ ಲಭಿಸಿದೆ.
ಪಾಕಿಸ್ತಾನದ ಕರಾಚಿ,ರಾವಲ್ಪಿಂಡಿ,ಲಾಹೋರ್ ನಗರಗಳಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನದ ಮಿಲಿಟರಿ ಪ್ರಧಾನ ಕಚೇರಿಯ ಸಮೀಪವೇ ಈ ಸ್ಪೋಟ ಸಂಭವವಿದೆ ಎನ್ನಲಾಗಿದ್ದು ಈ ಸ್ಪೋಟದಿಂದ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಪಾಕಿಸ್ತಾನದ ಒಂಬತ್ತು ನಗರಗಳಲ್ಲಿ ಸ್ಫೋಟಗಳು ವರದಿಯಾಗಿವೆ. ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಈ ಸ್ಪೋಟದಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಮತ್ತಷ್ಟು ಉಲ್ಬಣಗೊಳ್ಳುವ ಆತಂಕ ಎದುರಾಗಿದೆ.
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಭಯೋತ್ಪಾದಕರ ಒಂಬತ್ತು ನೆಲೆಗಳನ್ನು ಬಾಂಬ್ ದಾಳಿ ಮಾಡಿ ಉಡಾಯಿಸಿದೆ.ಅಲ್ಲದೇ ಇನ್ನಷ್ಟು ದಾಳಿಯ ಎಚ್ಚರಿಕೆ ನೀಡಿದೆ. ಕರಾಚಿ ಮತ್ತು ಲಾಹೋರ್, ಗುಜ್ರಾನ್ವಾಲಾ, ಚಕ್ವಾಲ್, ಅಟ್ಟಾಕ್, ಬಹವಾಲ್ಪುರ್, ಮಿಯಾನೋ ಮತ್ತು ಚೋರ್ನಲ್ಲಿ ಸ್ಫೋಟದ ಸದ್ದು ಕೇಳಿಸಿತು. ಇದು ಡ್ರೋನ್ ದಾಳಿಯಾಗಿದೆ ಎಂದು ಪಾಕಿಸ್ತಾನ ಮಿಲಿಟರಿ ಹೇಳಿಕೊಂಡಿದೆ.