Share this news

ಕಾರ್ಕಳ: ವಿದ್ಯೆ ಎನ್ನುವುದು ಬದುಕನ್ನು ರೂಪಿಸುತ್ತದೆ. ವಿದ್ಯೆಗೆ ಯಾವುದೇ ಜಾತಿ,ಧರ್ಮದ ಬೇಧವಿಲ್ಲ.ವಿದ್ಯಾರ್ಥಿಗಳು ಶಿಸ್ತಿನಿಂದ ಗುರಿಯತ್ತ ಸಾಗಿದರೆ ಜೀವನದಲ್ಲಿ ಏನನ್ನು ಸಾಧಿಸಲು ಸಾಧ್ಯ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಸ್ವಾಮೀಜಿಗಳಾದ ಈಶವಿಠಲದಾಸ ಸ್ವಾಮೀಜಿ ಹೇಳಿದರು.
ಅವರು ಜೂ‌.18 ರಂದು ಕಾರ್ಕಳದ KMES ಶಿಕ್ಷಣ ಸಂಸ್ಥೆಯ ಪೋಷಕ-ಶಿಕ್ಷಕ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಪಡೆದು ಸಾಧಿಸಲು ಛಲವಿದ್ದರೆ ಎಷ್ಟು ಎತ್ತರಕ್ಕೂ ಏರಬಹುದು ಎನ್ನುವುದಕ್ಕೆ ಡಾ ಎ.ಪಿ.ಜೆಅಬ್ದುಲ್ ಕಲಾಂ ಅವರು ಸಾಕ್ಷಿ. ಈ ಶಿಕ್ಷಣ ಸಂಸ್ಥೆಯು 42 ವರ್ಷಗಳ ಇತಿಹಾಸವಿರುವ ಸಂಸ್ಥೆ. ಇಲ್ಲಿನ ವಿದ್ಯಾರ್ಥಿಗಳು ಬಡಕುಟುಂಬಗಳಿಂದ ಬಂದರೂ, ವಿದ್ಯಾಭ್ಯಾಸದಲ್ಲಿ ಮಂಚೂಣಿಯಲ್ಲಿರುತ್ತಾರೆ. ವ್ಯವಹಾರಜ್ಞಾನವನ್ನು ಹೊಂದಿರುತ್ತಾರೆ.IA Sಆಫೀಸರ್, ಡಾಕ್ಟರ್,ಇಂಜಿನಿಯರ್‌ಗಳನ್ನು ಕೊಟ್ಟ ಈ ಸಂಸ್ಥೆಯ ಭವಿಷ್ಯಇನ್ನೂಉತ್ತಮವಾಗಲಿ, ಈ ಸಂಸ್ಥೆ ಶಿಕ್ಷಣದ ಜೊತೆಗೆ ಶಿಸ್ತು ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದರು.

ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎಸ್. ಇಮ್ತಿಯಾಜ್‌ ಅಹಮ್ಮದ್ ಮಾತನಾಡಿ“ ವಿದ್ಯಾರ್ಥಿಗಳು ಶಿಸ್ತಿನ ಕಡೆಗೆ ಗಮನಕೊಡಬೇಕು, ಮಾದಕ ವಸ್ತು, ಸಿಗರೇಟು, ಕುಡಿತ ಮೊದಲಾದ ದುಶ್ಚಟಗಳಿಗೆ ಬಲಿಯಾದರೆ ವಿದ್ಯಾರ್ಥಿಗಳ ಅಭಿವೃದ್ಧಿ ಸಾಧ್ಯವಿಲ್ಲ, ಕಾಲೇಜಿನ ಸ್ವತ್ತನ್ನು ಕಾಪಾಡಿಕೊಂಡು ಬರಬೇಕು” ಎಂದರು.

ಕಾಲೇಜಿನ ಪ್ರಾಂಶುಪಾಲ ಕೆ.ಬಾಲಕೃಷ್ಣರವರು ಮಾತನಾಡಿ, ಈ ವಿದ್ಯಾಸಂಸ್ಥೆ 42 ವರ್ಷಗಳನ್ನು ಪೂರೈಸಿದ ಇತಿಹಾಸವನ್ನು ಹೊಂದಿದೆ. ಕಾಲೇಜು ಎಲ್ಲಾ ಅನುಕೂಲತೆಗಳನ್ನು ಹೊಂದಿದೆ.NCC,NSS ಗಳನ್ನು ಪ್ರಾರಂಬಿಸುವ ಯೋಜನೆಯನ್ನು ಹೊಂದಿದೆ. ಸಿ.ಇ.ಟಿ, ನೀಟ್, ಜೆಇಇ ಮೈನ್ ತರಬೇತಿಗಳ ಸದುಪಯೋಗವನ್ನು ವಿದ್ಯಾರ್ಥಿಗಳುಪಡೆದುಕೊಳ್ಳಬೇಕುಜತೆಗೆ ಉತ್ತಮ ಪ್ರಯೋಗಶಾಲೆ, ಗ್ರಂಥಾಲಯ,ಆಟದಮೈದಾನ ಇರುವುದರಿಂದ ವಿದ್ಯಾರ್ಥಿಗಳು
ಇದರ ಪ್ರಯೋಜನವನ್ನು ಪಡೆಯಬೇಕುಎಂದರು. ನಾವು 12 ವಿದ್ಯಾರ್ಥಿಗಳನ್ನು ಒಂದು ಗುಂಪು ಮಾಡಿ, ಪ್ರತಿಯೊಂದು ಗುಂಪಿಗೆ ಒಬ್ಬರು ಉಪನ್ಯಾಸಕರು ಅಥವಾ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಉನ್ನತೀಕರಿಸಿ ಮೌಲ್ಯಯುತವಾದ ಶಿಕ್ಷಣ ನೀಡುತ್ತಿದ್ದೇವೆ” ಎಂದರು.
ಪ್ರೌಡಶಾಲಾ ವಿಭಾಗದ ಮುಖ್ಯಸ್ಥೆ ಹಾಗೂ ಉಪನ್ಯಾಸಕಿ ಶ್ರೀಮತಿ ಪಾಟ್ಕರ್ ಪ್ರಾಸ್ತವಿಕಭಾಷಣ ಮಾಡುತ್ತಾ “ನಾವಿಂದು ಬದಲಾವಣೆಯ ವರ್ಷದಲ್ಲಿದ್ದೇವೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಗಳನ್ನು ನಡೆಸಿ ವಿದ್ಯಾರ್ಥಿಗಳ ಸರ್ವಾಂಗೀಣಅಭಿವೃದ್ಧಿಯಕಡೆಗೆ
ಗಮನ ಕೊಡುತ್ತಿದ್ದೇವೆ” ಎಂದರು.

ಕನ್ನಡ ಶಿಕ್ಷಕಿ ಸಂಗೀತಾ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಲೊಲಿಟಾ ಡಿಸಿಲ್ವಾರವರು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು ಮತ್ತು ವಿದ್ಯಾರ್ಥಿಗಳುಇಡೀ ವರ್ಷದಲ್ಲಿ ನಡೆಸಬೇಕಾದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಸಂಯೋಜಕರಾದ ಕಾಲೇಜಿನ ಉಪನ್ಯಾಸಕಿ ಸುಮನ್, ಕನ್ನಡ ಉಪನ್ಯಾಸಕಿ ಸರಸ್ವತಿ ಕಾರ್ಯಕ್ರಮ ನಡೆಸಿಕೊಡಲು ಸಹಕರಿಸಿದರು.ಉಪನ್ಯಾಸಕಿ ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

 

 

 

 

 

 

 

 

Leave a Reply

Your email address will not be published. Required fields are marked *