ಅಜೆಕಾರು: ಮೊಬೈಲ್ ನಂಬರಿನ ಟೆಲಿಗ್ರಾಂ ಖಾತೆಗೆ ಬಂದಿದ್ದ ಸಂದೇಶದಲ್ಲಿನ ಪಾರ್ಟ್ ಟೈಮ್ ಜಾಬ್ನ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು 3 ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ. ಸತೀಶ್ ಎಂಬವರ ಮೊಬೈಲ್ ನಂಬರಿನ ಟೆಲಿಗ್ರಾಂ ಖಾತೆಗೆ ಕಳೆದ ಮೇ.22 ರಂದುTrishna Das ಎಂಬವರ ಖಾತೆಯಿಂದ ಪಾರ್ಟ್ ಟೈಮ್ ಜಾಬ್ ಬಗ್ಗೆ ಒಂದು ಸಂದೇಶ ಬಂದಿದ್ದು, ಸತೀಶ್ ಅವರು ಒಪ್ಪಿಕೊಂಡ ಮೇರೆಗೆ ಸ್ವಲ್ಪ ಸಮಯದ ನಂತರ Skechers Society ZB70 ಆನ್ ಲೈನ್ ಪ್ರೊಡೆಕ್ಟ್ ಸೆಲ್ಲಿಂಗ್ ಕಂಪನಿಗೆ ಮೊದಲು ರೂ.10,000 ಹೂಡಿಕೆ ಮಾಡುವಂತೆ ತಿಳಿಸಿದ್ದರು.
ಆ ಬಳಿಕ ಕಂಪನಿಯ ಪ್ರೊಡೆಕ್ಟ್ ಗಳನ್ನು ಸೇಲ್ ಮಾಡಿದಲ್ಲಿ ಕಮೀಷನ್ ಸಿಗುವುದಾಗಿ ತಿಳಿಸಿ Skechers Society ZB70 ಕಂಪನಿಯ ಲಿಂಕನ್ನು ಕಳುಹಿಸಿದ್ದು , ಲಿಂಕನ್ನು ತೆರೆದು ಅದರಲ್ಲಿ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದು , ಕಂಪನಿಯವರು ಹೇಳಿದಂತೆ ಸತೀಶ್ ಅವರು ರೂ. 3,74,114 ಅನ್ನು ವರ್ಗಾವಣೆ ಮಾಡಿದ್ದರು. ಆದರೆ ಬಳಿಕ ಕಂಪನಿಯವರು ಆದಾಯದ ಹಣವನ್ನಾಗಲಿ, ವರ್ಗಾವಣೆ ಮಾಡಿದ ಹಣವನ್ನೂ ನೀಡದೆ ವಂಚನೆ ಎಸಗಿದ್ದಾರೆ ಎಂದು ಸತೀಶ್ ಅಜೆಕಾರು ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.